ಬೆಂಗಳೂರು:ಕನ್ನಡದ ಮೊಟ್ಟಮೊದಲ ಒಟಿಟಿ ವೇದಿಕೆ ಎಂಬ ಹೆಗ್ಗಳಿಕೆ ಪಡೆದಿರುವ ‘ನಮ್ಮ ಫ್ಲಿಕ್ಸ್’ ಈಗ ಸಾಗರದಾಚೆಗೂ ಸದ್ದು ಮಾಡುತ್ತಿದೆ. ಈ ಕ್ಷೇತ್ರಕ್ಕೆ ಕಾಲಿಟ್ಟ ಕೇವಲ ಮೂರೇ ವರ್ಷದಲ್ಲಿ ನಮ್ಮ ಫ್ಲಿಕ್ಸ್ ಸಾರ್ವಜನಿಕರ ವಿಶ್ವಾಸ ಗಳಿಸಿದ್ದು, ಮನರಂಜನಾ ಕ್ಷೇತ್ರದಲ್ಲಿ ಹೊಸ ಹೊಸ ಒಳನೋಟ ತೆರೆದಿಡುವಲ್ಲಿ ಸಕ್ರಿಯವಾಗಿದೆ.
ದೇಶದಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದ್ದಂತೆ ಕರುನಾಡಿನ ಕೆಲ ಪ್ರತಿಭಾವಂತ ತಂತ್ರಜ್ಞರ ಸಹಯೋಗದಲ್ಲಿ ಮೊಳಕೆಯೊಡೆದಿದ್ದು ನಮ್ಮ ಫ್ಲಿಕ್ಸ್. ವಿಶೇಷ ಡಿಜಿಟಲ್ ಒಟಿಟಿ ಪ್ಲಾಟ್ ಫಾಮ್ರ್ ಮೂಲಕ ನಾಡಿನೆಲ್ಲೆಡೆ ಮನೆಮಾತಾಗಿರುವ ಈ ಸಂಸ್ಥೆ ಲಕ್ಷಾಂತರ ಜನರ ಮನರಂಜನೆಯ ದಾಹವನ್ನು ತಣಿಸುವಲ್ಲಿ ಯಶಸ್ವಿಯಾಗಿದೆ.
ನಮ್ಮ ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ 127 ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. 11 ಶಾರ್ಟ್ ಫಿಲಂ ಹಾಗೂ 100 ಭಾಗಗಳ ಎರಡು ಸೀರಿಯಲ್ ಸರಣಿಯನ್ನು ಸೇರ್ಪಡೆ ಮಾಡಲಾಗಿದೆ. ಇವು ಸೇರಿ ಹೊಸ ಸೇರ್ಪಡೆಯನ್ನು ಆಸ್ವಾದಿಸಲು ನಮ್ಮ ಫ್ಲಿಕ್ಸ್ ಆಪ್ ಅನ್ನು ಯಾವುದೇ ಆಂಡ್ರಾಯ್್ಡ ಅಥವಾ ಐ ಫೋನ್ ಮೊಬೈಲ್ ಮೂಲಕ ಪ್ಲೇಸ್ಟೋರ್, ಆಪ್​ಸ್ಟೋರ್, ಆಂಡ್ರಾಯ್್ಡ ಟಿವಿಗಳಲ್ಲಿ ಡೌನ್​ಲೋಡ್ ಮಾಡಿಕೊಂಡು ತಮಗಿಷ್ಟವಾದ ಸಿನಿಮಾ ಅಥವಾ ಶಾರ್ಟ್ ಫಿಲಂ ಅನ್ನು ಕಣ್ತುಂಬಿಕೊಂಡು ಮನರಂಜನೆ ಪಡೆಯಬಹುದು. ವೆಬ್​ಸೈಟ್​ನಲ್ಲೂ (www.nammaflix.com) ನೇರವಾಗಿ ವೀಕ್ಷಣೆ ಮಾಡಬಹುದು. ಇದನ್ನು ಇನ್ನಷ್ಟು ಸಾಧ್ಯವಾಗಿಸಲು ಸಂಸ್ಥೆಯು ದಸರಾ ಹಬ್ಬದ ಹಿನ್ನೆಲೆಯಲ್ಲಿ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಚಂದಾ ಪ್ಯಾಕ್ ಉಡುಗೊರೆಯನ್ನು ಪ್ರಕಟಿಸಿದೆ.
ರಿಯಾಯಿತಿ ಕೊಡುಗೆ:ದಸರಾ ಹಬ್ಬದ ಹಿನ್ನೆಲೆಯಲ್ಲಿ ನಮ್ಮ ಫ್ಲಿಕ್ಸ್ ತನ್ನ ಒಟಿಟಿ ವೇದಿಕೆಯಲ್ಲಿ ಕಲ್ಪಿಸಿರುವ ಸೇವೆಗಳನ್ನು ಚಂದಾದಾರರಿಗೆ ಕಡಿಮೆ ಮೊತ್ತದಲ್ಲಿ ನೀಡಲಿದೆ. ಇದಕ್ಕಾಗಿ ವಿವಿಧ ದರಪಟ್ಟಿ ಆಧರಿಸಿರುವ ಚಂದಾ ದರವನ್ನು ಅರ್ಧದಷ್ಟು ಇಳಿಸಿ ಹಬ್ಬದ ಕೊಡುಗೆಯಾಗಿ ನೀಡಿದೆ. ವಾರ್ಷಿಕ ಪ್ಯಾಕ್ 799 ರೂ. ಇದ್ದು, ಕೇವಲ 399 ರೂ. ಪಾವತಿಸಿದರೆ ನಮ್ಮ ಫ್ಲಿಕ್ಸ್​ನ ಎಲ್ಲ ಕಂಟೆಂಟ್ ವೀಕ್ಷಿಸಬಹುದಾಗಿದೆ. ಇದೇ ರೀತಿ ಅರ್ಧ ವಾರ್ಷಿಕ ಪ್ಯಾಕ್ 399 ರೂ. ಬದಲು 199 ರೂ.ಗೆ ಸಿಗಲಿದೆ. ತ್ರೖೆಮಾಸಿಕ ಪ್ಯಾಕ್ 199 ರೂ. ಬದಲು 99 ರೂ. ಹಾಗೂ ಮಾಸಿಕ ಪ್ಯಾಕ್ 99 ರೂ. ಬದಲು 49 ರೂ. ಪಾವತಿಸಿ ಸೌಲಭ್ಯ ಪಡೆಯಬಹುದಾಗಿದೆ.
ಇತ್ತೀಚಿಗೆ ಒಟಿಟಿ ಪ್ಲಾಟ್ ಫಾಮ್ರ್ ಜನಾಕರ್ಷಣೆಗೆ ಒಳಗಾಗಿದೆ. ನಮ್ಮ ಫ್ಲಿಕ್ಸ್ ವೇದಿಕೆಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿಯಮಿತವಾಗಿ ಹೊಸ ಸಿನಿಮಾ, ಶಾರ್ಟ್ ಫಿಲಂ ಹಾಗೂ ಸೀರಿಯಲ್ ಎಪಿಸೋಡ್​ಗಳನ್ನು ಸೇರ್ಪಡೆ ಮಾಡುತ್ತಿರುವುದು ಜನರು ಸ್ವೀಕರಿಸುತ್ತಿದ್ದಾರೆ. ವೀಕ್ಷಕರಿಗೆ ಇಷ್ಟವಾಗುವ ಇನ್ನಷ್ಟು ಸೌಲಭ್ಯವನ್ನು ಸಂಸ್ಥೆ ನೀಡಲಿದೆ ಎಂಬುದಾಗಿ ‘ನಮ್ಮ ಫಿಕ್ಸ್’ ಸಿಇಒ ವಿಜಯಪ್ರಕಾಶ್ ಅಕ್ಕರಕಿ ತಿಳಿಸಿದ್ದಾರೆ.

ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
