ಪೀಣ್ಯದಾಸರಹಳ್ಳಿ:ದಾಸರಹಳ್ಳಿ ಕ್ಷೇತ್ರದ ಜನತೆ ಕಳೆದ ಹಲವು ದಶಕಗಳಿಂದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಆಡಳಿತ ವೈಖರಿ ನೋಡಿದ್ದು, ಅಭಿವೃದ್ಧಿಗಿಂತ ಅಬ್ಬರದಲ್ಲೇ ಕಾಲ ಕಳೆಯುವ ಈ ಎರಡು ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಆಯ್ಕೆ ಮಾಡಲಿದ್ದಾರೆ. ಈ ಬಾರಿ ದಾಸರಹಳ್ಳಿ ‘ಕೈ’ವಶವಾಗುವುದರಲ್ಲಿ ಸಂದೇಹವೇ ಇಲ್ಲ ಕೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಿ. ಧನಂಜಯ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಚಿಕ್ಕಬಾಣಾವರ ನಗರ ಸಭೆ ವ್ಯಾಪ್ತಿಯ ಗಣಪತಿ ನಗರ, ರಾಘವೇಂದ್ರ ಬಡಾವಣೆ, ದ್ವಾರಕಾ ನಗರ, ನಂದಿನಗರ, ಕೆರೆ ಗುಡ್ಡದಹಳ್ಳಿ ಸೇರಿ ವಿವಿಧ ಬಡಾವಣೆಗಳಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮತ ಯಾಚಿಸಿದರು. ಕೇತ್ರದಲ್ಲಿ ನಮಗೆ ಬಿಜೆಪಿ ಪ್ರತಿಸ್ಪರ್ಧಿಯೇ ಹೊರತು ಜೆಡಿಎಸ್ ಅಲ್ಲ. ಕಳೆದ ಐದು ವರ್ಷ ಅಧಿಕಾರದಲ್ಲಿದ್ದ ಜೆಡಿಎಸ್‌ ಶಾಸಕರು ಯಾವುದೇ ರೀತಿಯ ಅಭಿವೃದ್ಧಿ ಮಾಡದೆ ವೃಥಾ ಕಾಲಹರಣ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಶೂನ್ಯತೆಯ ಕೂಪಕ್ಕೆ ತಳ್ಳಿದ್ದಾರೆ ಎಂದರು.
ಜನಸಾಮಾನ್ಯರ ಕೈಗೆ ಸಿಗದ ಇವರ ಆಡಳಿತ ವೈಖರಿಯನ್ನು ದಾಸರಹಳ್ಳಿಯ ಜನತೆ ಚೆನ್ನಾಗಿಯೇ ನೋಡಿದ್ದಾರೆ. ಕ್ಷೇತ್ರದ ಸಾಕಷ್ಟು ಜನ ತಮ್ಮ ಸಂಕಷ್ಟ ಹೇಳಿಕೊಳ್ಳಲು ಅವರ ಕಚೇರಿಗೆ ಅಲೆದು, ಪರಿಹಾರ ಸಿಗದೆ ಬರಿಯ ಓಡಾಟವೇ ಗಟ್ಟಿ ಎಂದುಕೊಂಡು ಬೇಸರದಿಂದ ಹಿಂತಿರುಗಿ ಬಂದಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಕಾಂಗ್ರೆಸ್‌ನತ್ತ ಒಲವು ತೋರಿ ನಮ್ಮೊಂದಿಗೆ ಬಂದಿದ್ದಾರೆ ಎಂದು ಹೇಳಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ದಾಸರಹಳ್ಳಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ದಾಸರಹಳ್ಳಿಯ ಸರ್ವಾಂಗೀಣ ಪ್ರಗತಿಗಾಗಿ ಅಗತ್ಯ ಅನುದಾನ ತಂದು ಕ್ಷೇತ್ರದಲ್ಲಿ ಮಾದರಿ ಪ್ರಗತಿ ಕಾರ್ಯ ಕೈಗೊಳ್ಳುತ್ತೇನೆ, ಮಾದರಿ ದಾಸರಹಳ್ಳಿ ಕ್ಷೇತ್ರ ನನ್ನ ಕನಸಾಗಿದ್ದು, ನಿಮ್ಮೆಲ್ಲರ ಸಹಕಾರ, ಬೆಂಬಲದ ಅಗತ್ಯವಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ನಿರುದ್ಯೋಗಿ ಯುವಕರು, ಮಹಿಳೆಯರ ಕಲ್ಯಾಣಕ್ಕಾಗಿ ಮತ್ತು ನೆಮ್ಮದಿಯ ಬದುಕಿಗಾಗಿ ವಿನೂತನ ಮತ್ತು ಜನಪರವಾದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜನರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವ ವಿಶ್ವಾಸವಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಕೆ. ನಾಗಭೂಷಣ್, ಕೆ.ಸಿ. ಅಶೋಕ್‌ ಸೇರಿ ಹಲವು ಮುಖಂಡರು ಹಾಗೂ ಕಾರ್ಯಕರ್ತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
