ಪೀಣ್ಯದಾಸರಹಳ್ಳಿ:ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಆರ್. ಮಂಜುನಾಥ್ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಮಲ್ಲಸಂದ್ರ ವಾರ್ಡ್​ನ ಮಲ್ಲಸಂದ್ರ ಸರ್ಕಲ್, ಶನಿಮಹಾತ್ಮ ದೇವಸ್ಥಾನ, ರವೀಂದ್ರನಗರ, ಕಲ್ಯಾಣನಗರ, ಬೈಲಪ್ಪ ಸರ್ಕಲ್, ದಾಸರಹಳ್ಳಿ ಮಾರ್ಕೆಟ್ ನೆಲಮಹೇಶ್ವರಮ್ಮ ರಸ್ತೆ, ಕಾಳಿಯಮ್ಮ ದೇವಸ್ಥಾನ, ಗಣೇಶ ಸಾಮಿಲ್ ರಸ್ತೆ, ಗಾರ್ಡನ್ ಶಾಲೆ ರಸ್ತೆ ಹೀಗೆ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದರು. ಕಳೆದ ಐದು ವರ್ಷಗಳಲ್ಲಿ ತಾವು ಅನುಷ್ಠಾನಗೊಳಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು. ಇದೇ ವೇಳೆ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ಇದನ್ನೂ ಓದಿ:ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ
ಬಳಿಕ ಮಾತಾಡಿದ ಮಂಜುನಾಥ್, ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿಯನ್ನು ಗಮನಿಸಿ ಮತ ನೀಡಬೇಕು. ಆ ಮೂಲಕ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಮನವಿ ಮಾಡಿದರು. ಹಲವು ವಾರ್ಡ್​ಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆಯನ್ನು ಮಾಡಲಾಗಿದೆ. ಹೋದಲ್ಲೆಲ್ಲ ಕ್ಷೇತ್ರದ ಜನರು ಅದ್ದೂರಿ ಸ್ವಾಗತವನ್ನು ನೀಡುತ್ತಿದ್ದಾರೆ. ಹೆಣ್ಣುಮಕ್ಕಳು ಆರತಿ ಮಾಡುವ ಮೂಲಕ ವಾರ್ಡ್​ಗಳಿಗೆ ಬರಮಾಡಿಕೊಳ್ಳುತ್ತಿದ್ದಾರೆ ಎಂದರು.
ದಾಸರಹಳ್ಳಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ರಾಜಕಾಲುವೆ ತಡೆ ಗೋಡೆ ನಿರ್ಮಾಣ ಸೇರಿ ರಸ್ತೆ, ಒಳಚರಂಡಿ ವ್ಯವಸ್ಥೆ, ಕಾವೇರಿ ನೀರಿನ ಪೂರೈಕೆ ಮತ್ತಿತರ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. 25 ವರ್ಷಗಳಿಂದ ಮನೆ ಕಟ್ಟಿಕೊಂಡು ಅಗತ್ಯ ಭೂದಾಖಲೆಗಳಲ್ಲಿದೆ ಅತಂತ್ರರಾಗಿದ್ದ ನೂರಾರು ಬಡ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಗೆಲುವಿಗೆ ದಾರಿಯಾಗಲಿದೆ ಜೆಡಿಎಸ್ ಪ್ರಣಾಳಿಕೆ: ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಅಭಿಮತ

ದಾಸರಹಳ್ಳಿ ಕಡೆಗಣನೆಯಾಗದಿರಲಿ: ಕ್ಷೇತ್ರದಿಂದ ವಾರ್ಷಿಕ ಸರಾಸರಿ 1500 ಕೋಟಿ ರೂ. ಜಿಎಸ್​ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
