ಬೆಂಗಳೂರು:ಕರೊನಾ ಮಟ್ಟಹಾಕಲು ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್​ಡೌನ್ ಲಕ್ಷಾಂತರ ಜನರ ನಿತ್ಯದ ಅನ್ನಕ್ಕೂ ಕುತ್ತು ತಂದಿದೆ. ದಿನದ ದುಡಿಮೆಯನ್ನೇ ನಂಬಿದವರು, ಹೋಟೆಲ್, ಬೇಕರಿ, ದಾನಿಗಳು ಕೊಟ್ಟಿದ್ದನ್ನು ಉಣ್ಣುತ್ತಿದ್ದವರ ಗೋಳು ಹೇಳತೀರದಾಗಿದೆ. ಇಂತಹವರಿಗೆ ಅನ್ನ ನೀಡುವ ಮೂಲಕ ರಾಜ್ಯದ ಎಲ್ಲ ಕಡೆಗಳಲ್ಲಿನ ವಿವಿಧ ಸಾಮಾಜಿಕ ಸಂಘಟನೆಗಳು ಮಾನವೀಯತೆ ತೋರ್ಪಡಿಸುತ್ತಿವೆ. ಲಾಕ್​ಡೌನ್ ಪರಿಣಾಮ ರಾಜ್ಯಾದ್ಯಂತ ಹೋಟೆಲ್, ಕ್ಯಾಂಟೀನ್, ರೆಸ್ಟೋರೆಂಟ್, ಗೂಡಂಗಡಿಗಳು ಬಾಗಿಲು ಮುಚ್ಚಿರುವ ಪರಿಣಾಮ ಸಾವಿರಾರು ನಿರ್ಗತಿಕರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಹಲವರಿಗೆ ತಾವು ತಿನ್ನುವುದರಲ್ಲೇ ಹಂಚಿಕೊಡುವವರೂ ನಮ್ಮ ಮಧ್ಯೆಯೇ ಇದ್ದಾರೆ. ಇವರ ಜತೆಗೆ ಹಲವು ಸಂಘಟನೆಗಳು ಸಹ ಆಹಾರ ನೀಡುವ ಕಾರ್ಯವನ್ನು ಆರಂಭಿಸಿವೆ. ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನ, ಅಕ್ಷಯ ಪಾತ್ರಾ ಮತ್ತು ನಮ್ಮ ಬೆಂಗಳೂರು ಫೌಂಡೇಷನ್(ಎನ್​ಬಿಎಫ್), ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್) ನೇರವಾಗಿ ಕಾರ್ವಿುಕರು ಇರುವ ಸ್ಥಳಗಳಿಗೇ ಹೋಗಿ ಆಹಾರ ನೀಡಿ ಹಸಿದವರ ಹೊಟ್ಟೆ ತುಂಬಿಸುತ್ತಿವೆ. .
ಎನ್​ಬಿಎಫ್ ಕಾರ್ಯ
ನಮ್ಮ ಬೆಂಗಳೂರು ಪ್ರತಿಷ್ಠಾನ(ಎನ್​ಬಿಎಫ್) ಜೈನ್ ಅಂತಾರಾಷ್ಟ್ರೀಯ ಟ್ರೇಡ್ ಸಂಘಟನೆ (ಜೆಐಟಿಒ), ಭಾಸ್ಕರ್ಸ್ ಮನೆ ಹೋಳಿಗೆ, ಗಿಲ್ಗಲ್ ಚಾರಿಟಬಲ್ ಟ್ರಸ್ಟ್ ಮತ್ತು ಇತರರ ಸಹಕಾರದೊಂದಿಗೆ ಅಸಂಘಟಿತ ವಲಯದ ಕಾರ್ವಿುಕರಿಗೆ ಮತ್ತು ಕೊಳಚೆ ಪ್ರದೇಶದ ನಿವಾಸಿಗಳಿಗೆ ಆಹಾರ ವಿತರಣೆ ಮಾಡುತ್ತಿದೆ. ದಾನಿಗಳು ಆಹಾರ ಪ್ಯಾಕೆಟ್​ಗಳನ್ನು ಸಂಸ್ಥೆಗೆ ತಲುಪಿಸಿದರೆ ಸಂಸ್ಥೆಯು ಅದನ್ನು ಅಗತ್ಯವುಳ್ಳವರಿಗೆ ತಲುಪಿಸಲಿದೆ.
ಅದಮ್ಯ ಸೇವೆ…
ಅದಮ್ಯ ಚೇತನ ಸಂಸ್ಥೆ ಸೋಮವಾರದಿಂದ ಬೆಂಗಳೂರಿನಲ್ಲಿ ‘ಈಸಿ ಟು ಕುಕ್ ಉಪ್ಪಿಟ್ಟು’ ಮತ್ತು ‘ಕಿಚಡಿ ಮಿಕ್ಸ್’ ವಿತರಣೆ ಮಾಡಲು ನಿರ್ಧರಿಸಿದೆ. ಕಾರ್ವಿುಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಾವಿರಾರು ಜನರ ಮನೆ ಮನೆಗೆ ಊಟ ತಲುಪಿಸುವ ಕಾರ್ಯ ಆರಂಭಿಸುವುದಾಗಿ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ. ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಜತೆಗೆ ಅಗತ್ಯವಿರುವ ಕುಟುಂಬಗಳಿಗೆ ಊಟ ತಲುಪಿಸುವ ಯೋಜನೆ ಇದಾಗಿದೆ. ಕರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅದಮ್ಯ ಅಡುಗೆಮನೆ ಮತ್ತೆ ತನ್ನ ಕಾರ್ಯ ಪ್ರಾರಂಭಿಸಲಿದ್ದು, ಆಯಾ ದಿನದ ಅಗತ್ಯಕ್ಕೆ ತಕ್ಕಂತಹ ಸಂಖ್ಯೆಯಲ್ಲಿ ಅಡುಗೆ ತಯಾರಿಸಿ ಉಚಿತವಾಗಿ ಹಂಚಲಿದೆ. ಈಸಿ ಟು ಕುಕ್ ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್ ಮತ್ತು ಉಚಿತ ಊಟದ ವ್ಯವಸ್ಥೆ ಕೈಗೊಳ್ಳುವ ಕಾರ್ಯದಲ್ಲಿ ಅಗತ್ಯವಿರುವ ಹಣ ಸಹಾಯಕ್ಕೆ ಸಂಘಸಂಸ್ಥೆಗಳು ಅಥವಾ ಸಾರ್ವಜನಿಕರು ಕೈಜೋಡಿಸಬಹುದಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಶುಚಿತ್ವ ವಸ್ತುಗಳ ಸಾಗಾಟಕ್ಕೂ ಅನುಮತಿ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
