ಬೆಂಗಳೂರು:ಮೈಸೂರು ದಸರಾದಂತೆಯೇ ಹಂಪಿ ಉತ್ಸವ ಹಾಗೂ ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವಗಳಾಗಿ ಪ್ರತಿ ವರ್ಷ ನಿಗದಿತ ದಿನಾಂಕದಂತೆ ಆಚರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ವಿಧಾನಪರಿಷತ್​ನಲ್ಲಿ ಅಲ್ಲಂ ವೀರಭದ್ರಪ್ಪ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬಾದಾಮಿ, ಬನವಾಸಿ, ಚಿತ್ರದುರ್ಗ, ಕಲ್ಯಾಣ ಚಾಲುಕ್ಯ ಸೇರಿ 9 ಉತ್ಸವಗಳನ್ನು ರಾಜ್ಯಮಟ್ಟದ ಉತ್ಸವಗಳನ್ನಾಗಿ ಆಚರಿಸಲು ಆಲೋಚಿಸಲಾಗಿದ್ದು,  ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.
ವಿಶ್ವವಿಖ್ಯಾತ ಹಂಪಿ ರೋಮ್ಂತ ಮಿಗಿಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಬಗ್ಗೆ ಬಹುದೊಡ್ಡ ಹೆಮ್ಮೆಯಿದೆ. ಪ್ರಾರಂಭಿಕವಾಗಿ ಕಮಲ ಮಹಲ್​ನಲ್ಲಿ ಸಣ್ಣ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದವು. ದಿವಂಗತ ಎಂ.ಪಿ.ಪ್ರಕಾಶ್ ವಿಶೇಷ ಕಾಳಜಿ ಕಾರಣಕ್ಕೆ ಉತ್ಸವದ ರೂಪ ಪಡೆದುಕೊಂಡಿದ್ದು, ಇದನ್ನು ರಾಷ್ಟ್ರೀಯ ಉತ್ಸವವಾಗಿ ಪರಿವರ್ತಿಸುವ ಅಗತ್ಯವಿದೆ ಎಂದ ಅವರು, ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕವಾಗಿ 500 ವರ್ಷಗಳಾದ ನೆನಪಿಗಾಗಿ ಒಮ್ಮೆ ನವೆಂಬರ್​ನಲ್ಲಿ ಆಚರಿಸಿದ್ದು, ಉತ್ಸವಕ್ಕೊಂದು ಪಾವಿತ್ರ್ಯತೆ ಸಿಗಲೆಂದು ಶ್ರೀಕೃಷ್ಣದೇವರಾಯರ ಜನ್ಮದಿನವಾದ ಜ.10 ಅನ್ನು ಆಧಾರವಾಗಿಟ್ಟು ಮೂರು ದಿನ ಆಚರಿಸಲಾಗಿದೆ ಎಂದು ವಿವರಿಸಿದರು. ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವವಾಗಿ ತೀರ್ವನಿಸುವ ಸಂದರ್ಭ ಐತಿಹಾಸಿಕ ಕರಗ ಮರೆಯಬಾರದು ಎಂದು ಪಿ.ಆರ್. ರಮೇಶ್ ಮನವಿ ಮಾಡಿದರು.
ಸ್ಮಾರಕಗಳ ಪುನರುತ್ಥಾನಕ್ಕೆ ಆದ್ಯತೆ:ಹಂಪಿಗೆ ರೋಪ್ ವೇ ನಿರ್ವಣ, ಸ್ಮಾರಕಗಳ ಪುನರುತ್ಥಾನಕ್ಕೂ ಆದ್ಯತೆ ನೀಡಬೇಕು ಎನ್ನುವುದು ಸರ್ಕಾರದ ಉತ್ಕಟ ಅಪೇಕ್ಷೆಯಾಗಿದೆ. ವಿಶ್ವ ಪಾರಂಪರಿಕವಾಗಿರುವ ಕಾರಣ ಪ್ರತಿಯೊಂದು ಅಭಿವೃದ್ಧಿ ಕೆಲಸಕ್ಕೆ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಿದ್ದು, ಅಗತ್ಯ ಅನುಮತಿ ಪಡೆದು ಅನುದಾನ ಒದಗಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಅಲ್ಲಂ ವೀರಭದ್ರಪ್ಪ ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ಸಚಿವ ಸಿ.ಟಿ.ರವಿ ವಾಗ್ದಾನ ನೀಡಿದರು.
ಸಿಎಸ್​ಆರ್ ನೆರವು
ರಾಜ್ಯದಲ್ಲಿ 319 ಪ್ರವಾಸಿ ಕೇಂದ್ರಗಳಿವೆ. ಈ ಪೈಕಿ 41 ಕೇಂದ್ರಗಳನ್ನು ಗುರುತಿಸಿ ಮೂಲ ಸವಲತ್ತು ಒದಗಿಸುವ ಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೂಡೀಕರಿಸಲು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ನಿಧಿ ನೆರವು ಪಡೆಯಲು ಯೋಚಿಸಲಾಗಿದೆ.
ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರು ಹಾಗೂ ಉದ್ಯಮಿಗಳ ಜತೆ ಚಹಾಕೂಟ ಏರ್ಪಡಿಸಿ ಯೋಜನೆ ಉದ್ದೇಶ ವಿವರಿಸಿ ಸಿಎಸ್​ಆರ್ ನಿಧಿಯಲ್ಲಿ ಸಹಾಯ ನೀಡಲು ಕೋರಲಾಗುವುದು ಎಂದು ರಮೇಶಗೌಡ ಕೇಳಿದ ಪ್ರಶ್ನೆಗೆ ಸಿ.ಟಿ.ರವಿ ಉತ್ತರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
