ಬೆಂಗಳೂರು: ಸರ್ಕಾರದ ಬಳಕೆಗೆ ನೇರವಾಗಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸೇವಾದಾರರು ಅಥವಾ ಥರ್ಡ್ ಪಾರ್ಟಿ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸಿದರೂ ರಕ್ಷಣೆ ಮಾಡುವ ಯಾವುದೇ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. ಈ ಡೇಟಾ ಈಗಿನ ಕಾಲಘಟ್ಟದಲ್ಲಿ ದೊಡ್ಡ ಆಸ್ತಿ ಎಂದೇ ಬಹುರಾಷ್ಟ್ರೀಯ ಕಂಪನಿಗಳು ಭಾವಿಸುತ್ತವೆ ಮತ್ತು ಅದನ್ನು ಭಾರಿ ಮೊತ್ತಕ್ಕೆ ಖರೀದಿಸುತ್ತವೆ. ಆ ಮಾಹಿತಿ ಅನುಸಾರವೇ ಗ್ರಾಹಕರನ್ನು ಸೃಷ್ಟಿಕೊಳ್ಳುತ್ತವೆ. ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ತರುತ್ತವೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸುಲಭವಾಗಿ ಟಾರ್ಗೆಟ್ ಮಾಡುತ್ತವೆ. ಅಲ್ಲದೆ, ಜನರು ನೀಡಿದ ಮಾಹಿತಿ ಬೇರೆಯವರಿಗೆ ಸಿಗುವಂತಾಗುವುದು ದೌರ್ಭಾಗ್ಯದ ಸಂಗತಿ. ಈ ಕಾರಣಕ್ಕೆ ಒಂದು ಸ್ಪಷ್ಟ ನೀತಿ ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಆದೇಶ ಮತ್ತು ಶಿಷ್ಟಾಚಾರ ಮುಂದಿಟ್ಟುಕೊಂಡು ನೀತಿ ತರುವ ಜತೆಗೆ ಕೇಂದ್ರ ಸರ್ಕಾರ ಜಾರಿ ಮಾಡುವ ಡೇಟಾ ಪ್ರೊಟೆಕ್ಷನ್ ಆಕ್ಟ್ ಬಳಿಕ ಅನುಷ್ಠಾನ ಮಾಡಿಕೊಳ್ಳಲಿದೆ.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆಕೋರರ ಹೆಡೆಮುರಿ ಕಟ್ಟಲು ಸಿಎಂ ಸಜ್ಜು; ಗೂಂಡಾ ಕಾಯ್ದೆ, ನಷ್ಟ ವಸೂಲಿ ಬ್ರಹ್ಮಾಸ್ತ್ರ ಬಳಕೆ
ಡೇಟಾದಲ್ಲಿ ಏನಿರುತ್ತೆ?
ಆದೇಶದಲ್ಲೇನಿದೆ? :ಸ್ಟೇಟ್ ಡೇಟಾ ಸೆಂಟರ್​ನಲ್ಲಿ ರಾಜ್ಯ ಸರ್ಕಾರದ ಬಹು ಮುಖ್ಯವಾದ ಅನೇಕ ಅಪ್ಲಿಕೇಶನ್​ಗಳು ಮತ್ತು ದತ್ತಾಂಶ ಇರುವುದರಿಂದ ಅಲ್ಲಿಂದ ಹೊಸ ಸಾಫ್ಟ್ ವೇರ್ ಅಪ್ಲಿಕೇಶನ್ ನಿರ್ವಹಿಸಲು ಭದ್ರತಾ ಕಾರಣಗಳಿಗಾಗಿ ಎಲ್ಲರೂ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ:VIDEO: ಗಣಪತಿ ಮೂರ್ತಿಯನ್ನು ನೆಲಕ್ಕೆಸೆದ ಬುರ್ಖಾಧಾರಿ ಮಹಿಳೆ ವಿರುದ್ಧ ಕ್ರಮ ಜರುಗಿಸಿದ ಮುಸ್ಲಿಂ ರಾಷ್ಟ್ರ!
ಆದ್ದರಿಂದ ಅಂತಹ ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ರಕ್ಷಣಾ/ ನಿರ್ವಹಣಾ ನೀತಿಯನ್ನು ಒಂದು ದಾಖಲೆ ರೂಪದಲ್ಲಿ ತುರ್ತಾಗಿ ಪ್ರಕಟಿಸಲಾಗಿದೆ. ಪ್ರೋಸೆಸ್, ಪ್ರೊಡ್ಯೂಸರ್ಸ್ ಇನ್ ಅಪ್ಲಿಕೇಶನ್ ಹೋಸ್ಟಿಂಗ್ ಮತ್ತು ಬೆಸ್ಟ್ ಪ್ರಾಕ್ಟೀಸಸ್ ಇನ್ ಡೇಟಾ ಪ್ರೊಟೆಕ್ಷನ್ ದಾಖಲೆಯನ್ನು ಇ- ಆಡಳಿತ ಕೇಂದ್ರ ಸಿದ್ಧಪಡಿಸಿದೆ. ಅದರ ಅನ್ವಯ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮಾರ್ಗಸೂಚಿಗಳನ್ನು ಮತ್ತು ದತ್ತಾಂಶ ಅಥವಾ ನಿರ್ವಹಣಾ ನೀತಿಯನ್ನು ಪಾಲಿಸಲು ಆದೇಶಿಸಲಾಗಿದೆ.
ಜನರ ಖಾಸಗಿ ಡೇಟಾ ರಕ್ಷಿಸಲು ರಾಜ್ಯ ಸರ್ಕಾರದ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + seventeen =
Remember me
