ಚಿಕ್ಕಮಗಳೂರು:ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಭಕ್ತರು ತೆರಳುವ ದಾರಿಯಲ್ಲಿ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್​ ಶಾಹಬಾಸ್​ ಮತ್ತು ವಾಹೀದ್​ ಹುಸೇನ್​ ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳು. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.
ಡಿಸೆಂಬರ್ 6ರಂದು ದತ್ತಜಯಂತಿ ಹಿನ್ನೆಲೆ ಅನುಸೂಯ ಜಯಂತಿ ನಡೆಯುವಾಗ ಈ ಪ್ರಕರಣ ನಡೆದಿತ್ತು. ದತ್ತ ಪೀಠಕ್ಕೆ ಬರುವ ಭಕ್ತಾದಿಗಳ ವಾಹನಗಳನ್ನು ಪಂಚರ್​ ಮಾಡುವ ದುರುದ್ದೇಶದಿಂದ ಗಿರಿಸಾಲಿನ ರಸ್ತೆಗಳ ತಿರುವುಗಳಲ್ಲಿ ಮೊಳೆಗಳನ್ನು ಸುರಿಯಲಾಗಿತ್ತು.

ಬಾಂಬ್ ಸ್ಕ್ವಾಡ್, ಪೊಲೀಸರು ಹಾಗೂ ಭಜರಂಗದಳದ ಕಾರ್ಯಕರ್ತರು ಮೊಳೆ ತೆರವುಗೊಳಿಸಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆಗೆ ಸೂಚನೆ ನೀಡಿದ್ದರು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ದತ್ತಪೀಠದ ದಾರಿಯಲ್ಲಿ ಮೊಳೆಗಳು; ಭಕ್ತರ ವಾಹನಗಳನ್ನು ಪಂಕ್ಚರ್ ಆಗಿಸುವ ಉದ್ದೇಶ?

ಹೆಲಿಕಾಪ್ಟರ್​ಗೆ ವಾಹನ ಪೂಜೆ ನೆರವೇರಿಸಿದ ಉದ್ಯಮಿ! ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

ದೆಹಲಿ ಕಾಡಿನಲ್ಲಿ ಶ್ರದ್ಧಾ ಮೂಳೆ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 12 =
Remember me
