ದಾವಣಗೆರೆ:ಅತ್ತೆ, ಮಾವನ ಮೇಲಿನ ಸಿಟ್ಟಿನಿಂದ ಸೊಸೆಯೊಬ್ಬಳು ಅಡಿಕೆ ಮರಗಳನ್ನೇ ಕಡಿದು ಹಾಕಿದ ಘಟನೆ ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪಿ ಸೊಸೆ.ಆರೋಪಿ ರೂಪಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಚಿದಾನಂದ ಸ್ವಾಮಿ ದಂಪತಿಗೆ ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ರೂಪಾ, ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳಿತ್ತಿದ್ದಳು. ಅಲ್ಲದೇ ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಆದರೆ ಅದೇನಾಯ್ತೋ ಗೊತ್ತಿಲ್ಲ ಅತ್ತೆ, ಮಾವನ ಮೇಲಿದ್ದ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ್ದಾಳೆ.ಈ ಸಂಬಂಧ ಚಿದಾನಂದ ಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಯಸ್ಸಾಗಿರುವ ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ. ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿ ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾರುಖ್ ಮ್ಯಾನೇಜರ್ ಸಂಭಾವನೆ ಎಷ್ಟು ಗೊತ್ತಾ? ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಈಕೆ ರೇಂಜ್….

ಚಪ್ಪಲಿ ಹಾರ ಹಾಕಿ ಮತಯಾಚನೆಗೆ ಹೊರಟ ಅಭ್ಯರ್ಥಿ; ಅಲೆಲೆಲೆಲೆ.. ಇದ್ಯಾವುದಪ್ಪ ಹೊಸ ವರಸೆ? ಎಂದ್ರು ನೆಟ್ಟಿಗರು

ಗೋಡೆ ಮೇಲೆ ಹಲ್ಲಿ ಕಂಡರೆ ಭಯಪಡಬೇಡಿ..ಹೀಗೆ ಮಾಡಿ ಮತ್ತೆ ಬರೋದಿಲ್ಲ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eight =
Remember me
