ಹಾಸನ:ಮಾವನಿಂದಲೇ ಅತ್ಯಾಚಾರಕ್ಕೀಡಾಗಿದ್ದ ಸೊಸೆ ಮೃತಪಟ್ಟಿದ್ದು, ಪತಿಯ ಮನೆ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕೊಡಬೇಕು ಎಂದು ಸಂತ್ರಸ್ತೆಯ ಪೋಷಕರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಕರಣ ವರದಿಯಾಗಿದೆ.
ಕೆ.ಆರ್.ನಗರ ತಾಲೂಕಿನ ಕಾಕನಹಳ್ಳಿ ಗ್ರಾಮದ ಲಕ್ಷ್ಮೀ (30) ಮೃತಪಟ್ಟವರು. ಮಾವ ವೆಂಕಟೇಶ್ ಜೋಗಿ (53) ಅತ್ಯಾಚಾರ ಆರೋಪಿ. ಲಕ್ಷ್ಮೀಯನ್ನು ಆರು ವರ್ಷಗಳ ಹಿಂದೆ ಬೇಲೂರು ತಾಲೂಕಿನ ಸಿ. ಹೊಸಳ್ಳಿ ಗ್ರಾಮದ ಪುಟ್ಟರಾಜು ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ದುರಂತವೆಂದರೆ ಪತಿಯ ತಂದೆ ಮಕರ ಸಂಕ್ರಾಂತಿಯಂದು ಲಕ್ಷ್ಮೀ ಮೇಲೆ ಅತ್ಯಾಚಾರ ಎಸಗಿದ್ದ.
ಇದನ್ನೂ ಓದಿ:ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…
ಇದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದ ಲಕ್ಷ್ಮೀ ಮಾರನೇ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಲಕ್ಷ್ಮೀಗೆ ಕೂಡಲೇ ಹೊಳೆನರಸೀಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದಾಗ್ಯೂ ಚಿಕಿತ್ಸೆ ಫಲಕಾರಿ ಆಗದ್ದರಿಂದ ಲಕ್ಷ್ಮೀ ಭಾನುವಾರ ಕೊನೆಯುಸಿರೆಳೆದಿದ್ದರು.
ಲಕ್ಷ್ಮೀಯ ಮರಣದ ಬಳಿಕ ಎರಡೂ ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿದ್ದು, ಪತಿ ಪುಟ್ಟರಾಜು ಮನೆ ಮುಂದೆಯೇ ಲಕ್ಷ್ಮೀ ಅಂತ್ಯಸಂಸ್ಕಾರ ನಡೆಸಬೇಕು ಎಂದು ಆಕೆ ಪಾಲಕರು ಪಟ್ಟು ಹಿಡಿದಿದ್ದರು. ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದ್ದು, ಆರೋಪಿ ವೆಂಕಟೇಶ್ ಜೋಗಿ ವಿರುದ್ದ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…

ಇಲ್ಲ ಅಂದ್ರೆ ಕೈ ಕೊಯ್ತೀನಿ..; ಬೆತ್ತಲೆ ಫೋಟೋಗಾಗಿ 17 ವರ್ಷದ ಹುಡುಗಿಗೆ ಬ್ಲ್ಯಾಕ್​ಮೇಲ್​ ಮಾಡಿದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 7 =
Remember me
