ಮೂಲ್ಕಿ(ಮಂಗಳೂರು):ಬಾಳಿ ಬದುಕಬೇಕಿದ್ದ ಮಗಳಿಗೂ ವಿಷವುಣಿಸಿದ ದಂಪತಿ ದುರಂತ ಅಂತ್ಯ ಕಂಡಿದೆ. ಅಪ್ಪ-ಅಮ್ಮ-ಮಗಳು ಮನೆಯಲ್ಲೇ ಶವವಾಗಿ ಮಲಗಿದ್ದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇಲ್ಲಿನ ಪಡುಪಣಂಬೂರು ಕಲ್ಲಾಪು ಬಳಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಸೋಮವಾರ ಬೆಳಕಿಗೆ ಬಂದಿದೆ. ಮೃತರನ್ನು ವಿನೋದ್ ಸಾಲ್ಯಾನ್(40), ರಚನಾ(38), ಸಾಧ್ಯ(8) ಎಂದು ಗುರುತಿಸಲಾಗಿದೆ.
ಮುಂಬೈನ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ವಿನೋದ್, ಪತ್ನಿ ಹಾಗೂ ಮಗುವಿನೊಂದಿಗೆ ಒಂದು ವರ್ಷದ ಹಿಂದೆ ಊರಿಗೆ ಹಿಂದಿರುಗಿದ್ದರು. ಬಳಿಕ ಬೆಳ್ಳಾಯೂರು ಕಲ್ಲಾಪು ಬಳಿಯ ಇಂದಿರಾ ಎಂಬುವರ ಮನೆಯಲ್ಲಿ ಬಾಡಿಗೆಗೆ ನೆಲೆಸಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎಲಾಗುತ್ತಿದೆ.
ಎರಡು ದಿನಗಳಿಂದ ಮನೆಯಿಂದ ಯಾರೂ ಹೊರಗೆ ಬಾರದ ಕಾರಣ ನೆರೆಹೊರೆಯವರು ಕಿಟಕಿ ಮೂಲಕ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಲಗಿದ್ದ ಸ್ಥಿತಿಯಲ್ಲಿಯೇ ಚಾಪೆ ಮೇಲೆ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ವಿಷದ ಬಾಟಲಿಯೂ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಮೂಲ್ಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.vijayavani.net/love-case-suicide/
ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 + seventeen =
Remember me
