ಚಿಕ್ಕಬಳ್ಳಾಪುರ:ಯುವಕನ ಕೊಲೆಗೆ ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು, ಕೊಲೆ ಮಾಡಿದ ಪ್ರಿಯತಮೆಯ ತಂದೆಯ ಮನೆಯನ್ನ ಧ್ವಂಸ ಮಾಡಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ ಇದೇ ಗ್ರಾಮದ ಶಿರಿಷಾ ಹಾಗೂ ಮೃತ ಹರೀಶ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 10 ತಿಂಗಳ ಹಿಂದೆ ಇಬ್ಬರು ಪ್ರೇಮ ವಿವಾಹವಾಗಲು ಮನೆ ಬಿಟ್ಟು ಹೋಗಿದ್ದರು. ಈ ವೇಳೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ರಾಜೀ ಪಂಚಾಯತಿ ಮೂಲಕ ಶಿರೀಷಾಳನ್ನು ತಮ್ಮ ಮನೆಗೆ ಕರೆದುಕೊಂದು ಹೋಗಿದ್ರು ತಂದೆ ವೆಂಕಟೇಶ್. ಆದ್ರೆ, ಮನೆಗೆ ಹೋದ ಶಿರೀಷಾ ಪ್ರಿಯಕರ ಹರೀಶ್ ಕೊರಗಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ಇದನ್ನೂ ಓದಿ:ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!
ಕಳೆದ 10 ತಿಂಗಳಿಂದ ತನ್ನ ಮಗಳ ಸಾವಿಗೆ ಈ ಹರೀಶ್ ಪ್ರೀತಿ ಮಾಡಿದ್ದೇ ಕಾರಣ ಅಂತ ಹೊಂಚು ಹಾಕಿ ಒಳಗೊಳಗೆ ಕುದಿಯುತ್ತಿದ್ದ ಶಿರಿಷಾ ತಂದೆ ವೆಂಕಟೇಶ್. ಕಳೆದ ರಾತ್ರಿ ತನ್ನ ಸಂಬಂಧಿ ಗಣೇಶ್ ಜತೆ ಸೇರಿ ಯುವಕ ಹರೀಶ್ ನನ್ನ ಕೊಲೆ ಮಾಡಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದಾಗ ಹರೀಶ್ ಗೆ ಮೊದಲು ದೊಣ್ಣೆಯಲ್ಲಿ ಹೊಡೆದು ತದನಂತರ ಚಾಕುವಿನಿಂದ ಎದೆಗೆ 17ರಿಂದ18 ಬಾರಿ ಇರಿದು ಕೊಂದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ತಡರಾತ್ರಿಯೇ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್ ನನ್ನ ಬಂಧಿಸಿದ್ದಾರೆ. ಈ ಮಧ್ಯೆ ಯುವಕ ಹರೀಶ್ ಕೊಲೆಗೆ ಆಕ್ರೋಶಗೊಂಡ ಆತನ ಸಂಬಂಧಿಕರು, ವೆಂಕಟೇಶ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಬೀಗ ಹಾಕಿದ್ದ ಮನೆಯ ಬೀಗವನ್ನ ಹೊಡೆದು ಹಾಕಿ, ಕಿಟಕಿ ಬಾಗಿಲುಗಳನ್ನ ಧ್ವಂಸ ಮಾಡಿದ್ದಾರೆ. ಮನೆಯೊಳಗೆ ನುಗ್ಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ:ಮಗಳ ಆತ್ಮಹತ್ಯೆ ಸೇಡಿಗೆ ಯುವಕನ ಬರ್ಬರ ಕೊಲೆ: ವರ್ಷದಿಂದ ನಡೆದಿತ್ತು ಭಾರಿ ಸಂಚು
ಬೆಂಕಿ ಹಚ್ಚುತ್ತಿದ್ದ ವೇಳೆ ಒರ್ವ ಯುವಕ ಸಹ ಬೆಂಕಿ ತಗುಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಹರೀಶ್ ಸಂಬಂಧಿಕರ ಆಕ್ರೋಶದ ಕಟ್ಟೆ ಹೊಡೆದು ಇಡೀ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ನಿಯಂತ್ರಿಸಲಾಗಲಿಲ್ಲ. ಕೊನೆಗೆ ಹರೀಶ್​ನನ್ನು ಅವರ ಮನೆ ಬಳಿಯೇ ಮಣ್ಣು ಮಾಡಬೇಕು ಅಂತ ಪಟ್ಟುಹಿಡಿದ್ದಾರೆ. ಸದ್ಯ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರೊನಾ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಡಿಸಿ ನಂಬರ್ ಕೊಟ್ಟ ಭೂಪ: ಮುಂದೇನಾಯ್ತು ನೀವೇ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 5 =
Remember me
