ಶಿವಮೊಗ್ಗ:ಮನೆಯಲ್ಲೇ ತಾಯಿ ಶವದ ಜತೆ ಮಗಳು ಐದು ದಿನ ಕಾಲ ಕಳೆದಿದ್ದಾಳೆ! ದುರ್ವಾಸನೆಯ ಜಾಡು ಹಿಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಮನೆಯ ಒಳ ಹೋಗಿ ನೋಡಿದಾಗ ಪ್ರಕರಣ ಬಯಲಾಗಿದೆ.
ನಗರದ ಬಸವನಗುಡಿಯ ಐದನೇ ತಿರುವಿನ ಮನೆಯೊಂದರಲ್ಲಿ 65 ವರ್ಷದ ರಾಜೇಶ್ವರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 5 ದಿನದ ಹಿಂದೆಯೇ ವೃದ್ಧೆ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಮನೆಯಲ್ಲಿ ತಾಯಿ ಹಾಗೂ ಮಗಳು ಇಬ್ಬರೇ ವಾಸವಿದ್ದರು. ಇದು ಸಹಜ ಸಾವೋ ಅಥವಾ ಕೊಲೆಯೋ ಇನ್ನೂ ತಿಳಿದಿಲ್ಲ.
ಇದನ್ನೂ ಓದಿರಿಬಾಲಿವುಡ್​ ನಟನಿಗೆ ವಾಟ್ಸ್​ಆ್ಯಪ್​ನಲ್ಲಿ ಬಂತು ಡಿವೋರ್ಸ್​ ನೋಟಿಸ್ !
ರಾಜೇಶ್ವರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೆಚ್ಚಿನ ಪ್ರಮಾಣದ ಔಷಧ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇವರ ಪುತ್ರಿ ಐದು ದಿನಗಳಿಂದ ಶವದೊಂದಿಗೆ ಇದ್ದದ್ದು ಹೇಗೆ? ಎಂಬ ಕುತೂಹಲ ವ್ಯಕ್ತವಾಗಿದೆ.
ರಾಜೇಶ್ವರಿ ಪುತ್ರಿ ಸ್ನಾತಕೋತ್ತರ ಪದವೀಧರೆ, ಅವಿವಾಹಿತೆ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈಕೆಯನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ರಹಸ್ಯ ತಿಳಿಯಲಿದೆ.
ಇದನ್ನೂ ಓದಿರಿಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
