ಉಡುಪಿ: ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನ ಮರೆಯಾಗುತ್ತಿರುವ ಸಮಯದಲ್ಲಿ ಅಪ್ಪಟ್ಟ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ನವೆಂಬರ್​ನಲ್ಲಿ ಜನಿಸಿದ ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ-ಪ್ರತಿಮಾ ದಂಪತಿ ‘ಕನ್ನಡಾ’ಭಿಮಾನ ಮೆರೆದವರು.
ಬೆಂಗಳೂರಿನಲ್ಲಿ 2019 ನ.27ರಂದು ಜನಿಸಿದ ಚೊಚ್ಚಲ ಮಗಳಿಗೆ ಮುಂದಿನ ತಿಂಗಳು ಹುಟ್ಟುಹಬ್ಬ ಸಂಭ್ರಮ. ಒಳಾಂಗಣ ವಿನ್ಯಾಸ ಗುತ್ತಿಗೆ ವೃತ್ತಿಯಲ್ಲಿರುವ ಪ್ರತಾಪ್ ಶೆಟ್ಟಿ 25 ವರ್ಷಗಳಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಾರೆ.
ಕಾರ್ಯನಿಮಿತ್ತ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿ ಅನೇಕ ಮಂದಿಯ ಹೆಸರು ತಮಿಳರಸನ್, ತಮಿಳುದೊರೈ ಮುಂತಾದ ರೀತಿಯಲ್ಲಿ ಇರುವುದನ್ನು ಗಮನಿಸಿದ್ದೆ. ಹೀಗಾಗಿ ಮಗುವಿಗೆ ಅದೇರೀತಿ ಹೆಸರು ಇಡಬೇಕು ಎಂದು ಯೋಚಿಸಿದೆ. ಈ ಮೂಲಕವಾದರೂ ಕನ್ನಡ ಪದ ಉಚ್ಚಾರಣೆಯಾಗುತ್ತಿರಲಿ ಎಂಬ ಬಯಕೆ ನನ್ನದು. ಇದಕ್ಕೆ ಪತ್ನಿಯೂ ಸಾಥ್ ನೀಡಿದ್ದಾಳೆ. ಅಷ್ಟಕ್ಕೂ ಒಂದು ವಾಕ್ಯದಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರತಾಪ್ ಶೆಟ್ಟಿ.
ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
