ದಾವಣಗೆರೆ:ನೀರಾವರಿಗೆ ಸರಿಯಾಗಿ ವಿದ್ಯುತ್​ ನೀಡಿ ಸ್ವಾಮಿ ಎಂದು ಕೇಳದ ಬಂದಿದ್ದ ನೂರಾರು ರೈತರಿಗೆ ಉಡಾಫೆ ಉತ್ತರ ಕೊಟ್ಟ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಕೆಇಬಿ ಕಛೇರಿ ಬಳಿ ನಡೆದಿದೆ.
ಜಗಳೂರಿನ ಎಇಇ ಗಿರೀಶ್ ನಾಯ್ಕ್​ಗೆ ರೈತರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅಧಿಕಾರಿಗೆ ರೈತರಿಂದ ಧರ್ಮದೇಟು ಬಿದ್ದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಹೊಡಿಬೇಡಿ…ಹೊಡಿಬೇಡಿ ಎಂದು ಕೆಲವರು ಕೂಗಿಕೊಂಡಿದ್ದಾರೆ.
ಜಮೀನಿಗೆ ನೀರು ಹಾಯಿಸಲು ಪಂಪ್ ಸೆಟ್ ಅವಶ್ಯಕತೆ ಇದ್ದು, ಸರಿಯಾಗಿ ವಿದ್ಯುತ್ ನೀಡಿ ಸ್ವಾಮಿ, ನಮಗೆ ಬೆಳೆ ಬೆಳೆಯಲು ತುಂಬಾ ತೊಂದರೆಯಾಗ್ತಿದೆ ಎಂದು ಹೇಳಲು ರೈತರು ಬಂದಿದ್ದರು. ಆದರೆ, ಸಮಾಧಾನಕರ ಅಥವಾ ಭರವಸೆ ಉತ್ತರವನ್ನು ನೀಡದ ಅಧಿಕಾರಿ, ರೈತರ ಮುಂದೆ ನಾಲಿಗೆ ಹರಿಬಿಟ್ಟಿದ್ದಾರೆ. ಶಾಸಕ ಎಸ್.ವಿ.ರಾಮಚಂದ್ರ ಅವರ ಬರ್ತಡೇ ಇದೆ, ಸುಮ್ಮಿನಿರಿ ಎಂದು ಏರು ಧ್ವನಿಯಲ್ಲಿ ಅಧಿಕಾರಿ ಗದರಿದ್ದಾರೆ.
ಎಇಇ ಗಿರೀಶ್ ನಾಯ್ಕ್ ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ರೈತರು, ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಂಭವಿಸಿದ ತಳ್ಳಾಟದಲ್ಲಿ ಅಧಿಕಾರಿಗೆ ಗೂಸಾ ಬಿದ್ದಿದೆ ಎನ್ನಲಾಗಿದೆ‌. ಅಧಿಕಾರಿಗೆ ರೈತರ ಬವಣೆಗಿಂತ ಶಾಸಕನ ಬರ್ತಡೇಯೇ ಹೆಚ್ಚಾಯ್ತಾ? ರೈತರಿದ್ದರೆ ನಾವು ಎಂಬ ಕನಿಷ್ಠ ಜ್ಞಾನವು ಅರ್ಥವಾಗಲಿಲ್ವಾ ಎಂಬ ಪ್ರಶ್ನೆ ಮೂಡಿದೆ.(ದಿಗ್ವಿಜಯ ನ್ಯೂಸ್​)
2 ಹುಂಜಕ್ಕಾಗಿ ಪೊಲೀಸ್​ ಠಾಣೆಗೆ ಮುಗಿಬಿದ್ದ ಜನರು! ಕೋಳಿಗಳಿಗೆ ಬಂದ ಬೇಡಿಕೆ ಕಂಡು ದಂಗಾದ ಪೊಲೀಸರು

ಬ್ರಿಟಿಷ್​ ಕೌನ್ಸಿಲ್​ ಜಾಬ್​ ಬಿಟ್ಟು ಟೀ ಮಾರಾಟಕ್ಕಿಳಿದ ಎಂಎ ಇಂಗ್ಲಿಷ್​ ಪದವೀಧರೆಯ ಸ್ಫೂರ್ತಿದಾಯಕ ಕತೆ ಇದು!

ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
