ದಾವಣಗೆರೆ:ಮಹಾಮಾರಿ ಕರೊನಾ ವೈರಸ್​ನಿಂದ ಉಂಟಾದ ಲಾಕ್​ಡೌನ್​ನಿಂದ ಎಷ್ಟೋ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಾಕ್​ಡೌನ್​ ಅತಿಥಿ ಉಪನ್ಯಾಸಕರನ್ನೂ ಬಿಟ್ಟಿಲ್ಲ.
ದಾವಣಗೆರೆ ನಿವಾಸಿ ಅರುಣಕುಮಾರ್​ ಎಂಬುವರು ಅತಿಥಿ ಉಪನ್ಯಾಸಕ ಕೆಲಸ ಕಳೆದುಕೊಂಡು ಇದೀಗ ಜೀವನ ಸಾಗಿಸಲು ನಗರದ ವಿದ್ಯಾನಗರದಲ್ಲಿ ಬೀದಿಬದಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಕಾಲೇಜಿನ ಕೊಠಡಿಯಲ್ಲಿ ಪಾಠ ಮಾಡಬೇಕಿದ್ದ ಉಪನ್ಯಾಸಕರು ಬದಿಯಲ್ಲಿ ಸೊಪ್ಪು, ತರಕಾರಿ, ತೆಂಗಿನಕಾಯಿ, ಶೇಂಗಾ ಹಾಗೂ ಗೋವಿನಜೋಳದ ತೆನೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:ವಿಶ್ವದ ಹಿರಿಯ ಜೀವಿತ ವಿವಾಹಿತರಿವರು- ಗುಟ್ಟಾಗಿ ಮದುವೆಯಾಗಿದ್ದ ಇವರ ಹೆಸರೀಗ ವಿಶ್ವದಾಖಲೆ
ಅರುಣಕುಮಾರ್ ಮೂಲತಃ ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ನಿವಾಸಿಯಾಗಿದ್ದು, ಚಾಣಕ್ಯ ಪದವಿ ಕಾಲೇಜಿನಲ್ಲಿ 4 ವರ್ಷದಿಂದ ಅತಿಥಿ ಉಪನ್ಯಾಸಕರಾಗಿದ್ದರು. ಕಾಮರ್ಸ್ ಅಕೌಂಟೆನ್ಸಿ ವಿಷಯವನ್ನು ಬೋಧಿಸುತ್ತಿದ್ದರು.
ಕಾಲೇಜುಗಳು ಬಂದ್ ಆಗಿ 7 ತಿಂಗಳಾಯ್ತು. ವೇತನವಿಲ್ಲದೇ ಜೀವನ ಬಂಡಿ ಸಾಗಲ್ಲ. ಮನೆ ಬಾಡಿಗೆ, ಜೀವನ ನಿರ್ವಹಣೆಗಾಗಿ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಅನ್ನ‌ ಮಾರ್ಗಕ್ಕಾಗಿ ತರಕಾರಿ ಮಾರಾಟ ರಹದಾರಿಯಾಯ್ತು ಎಂದಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಳ್ಳಂಬೆಳಗ್ಗೆಯೇ ಮೂವರು ಉಗ್ರರನ್ನು ಹೊಡೆದುರುಳಿಸಿದ ಯೋಧರು: ಓರ್ವ ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
