ದಾವಣಗೆರೆ:ಕರೊನಾ ವಾರಿಯರ್ಸ್​ಗೆ ಬುದ್ಧಿ ಹೇಳುವ ಭರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತಿನ ಮಲ್ಲ ಎಂದ ಪ್ರಸಂಗ ಹೊನ್ನಾಳಿಯ ಟಿ.ಬಿ. ರಸ್ತೆ, ಹೊಳೆಮಠ ಕಾಂಪೌಂಡ್‌ನಲ್ಲಿ ನಡೆದಿದೆ.
ಕರೊನಾ ಸೋಂಕಿತರಿದ್ದ ಏರಿಯಾವನ್ನು ಸೀಲ್​ಡೌನ್​ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದರು. ಈ ವೇಳೆ ಕರೊನಾ ವಾರಿಯರ್ಸ್​ ಒಬ್ಬರು ಕಟ್ಟಡಕ್ಕೆ ಸ್ಯಾನಿಟೈಸರ್​ ಸಿಂಪಡಿಸುತ್ತಿದ್ದ ರೀತಿ ನೋಡಿ, ಬೇರೊಬ್ಬರನ್ನು ಸಿಂಪಡಿಸುವಂತೆ ಹೇಳಿದರು. ಬಳಿಕ ಪ್ರಧಾನಿಯಂತೆ ಇವನೊಬ್ಬ ಮಾತಿನ ಮಲ್ಲ ಎಂದರು.
ಇದನ್ನು ಓದಿ:ಹುಲಿ ಗಣತಿಗೆ ಪಟ್ಟ ಪಾಡು ಎಂಥದ್ದು? ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಯ್ತು 6.20 ಲಕ್ಷ ಮಾನವ ದಿನಗಳ ಶ್ರಮ
ಪ್ರಧಾನ ಮಂತ್ರಿ ಮಾಡಿದಂತೆ ಮಾಡುತ್ತಾನೆ. ಅವನೂ ಭಾಷಣ ಮಾಡಲು ಆರಂಭಿಸಿದ್ದಾನೆ ಎಂದು ಕರೊನಾ ವಾರಿಯರ್‌ಗೆ ಛೇಡಿಸಿದರು. ಬುದ್ಧಿ ಹೇಳುವ ಭರದಲ್ಲಿ ಪ್ರಧಾನಿ ಮಂತ್ರಿಯನ್ನೇ ರೇಣುಕಾಚಾರ್ಯ ಮಾತಿನ ಮಲ್ಲ ಎಂದರು.(ಏಜೆನ್ಸೀಸ್​)
ಈ ಎರಡು ಕರೊನಾ ಔಷಧಿ ಕೊಳ್ಳಲು ನಿಮ್ಮ ಆಧಾರ್​ ಕಾರ್ಡ್​ ರೆಡಿ ಇಟ್ಟುಕೊಳ್ಳಿ…!

Sign in to your account
Please enter an answer in digits:6 − one =
Remember me
