ದಾವಣಗೆರೆ:ಉರ್ದು ಶಾಲೆಯ ಶಿಕ್ಷಕನ ವಿರುದ್ಧ ಕೋಮು ಗಲಭೆಗೆ ಪ್ರಚೋದನೆ ಹಾಗೂ ಸಹಶಿಕ್ಷಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಚನ್ನಗಿರಿ ತಾಲೂಕಿನ ದೊಡ್ಡಗಟ್ಟಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಕನ್ನಡ ಭಾಷೆಯ ಶಿಕ್ಷಕ ಆಜ್ಗರಲಿ ಖಾನ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಈತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಸ್​​​ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಕ್ಷಕ ಆಜ್ಗರಲಿ ಖಾನ್ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಸಹ ಶಿಕ್ಷಕಿಯರ ಮೈ-ಕೈ ಮುಟ್ಟಿ ಅಸಭ್ಯ ವರ್ತನೆ ಮಾಡುತ್ತಾರೆ ಎಂದು ದೂರಲಾಗಿದೆ. ಶಿಕ್ಷಕನ ಉಪಟಳದಿಂದ ಬೇಸತ್ತು ಈಗಾಗಲೇ ಕೆಲ ಸಹ ಶಿಕ್ಷಕಿಯರು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರಂತೆ. ಈತನ ದುರ್ವರ್ತನೆ ಸಹಿಸಲಾದೇ ವರ್ಗಾವಣೆ ಮಾಡುವಂತೆ ಪ್ರಸ್ತುತ ಶಾಲೆಯ ಮುಖ್ಯ ಶಿಕ್ಷಕಿ ಅಂಗಲಾಚುತ್ತಿದ್ದಾರಂತೆ.
ಗ್ರಾಮದ ಹಿರಿಯರು ಸುಮಾರು ಐದಾರು ವರ್ಷಗಳಿಂದ ಶಿಕ್ಷಕನಿಗೆ ನಿರಂತರವಾಗಿ ಬುದ್ಧಿ ಹೇಳುತ್ತಾ ಬಂದಿದ್ದಾರೆ. ಆದರೆ, ಗ್ರಾಮದ ಹಿರಿಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವಂತೆ. ಅಲ್ಲದೆ, ಶಾಲೆಯ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.
ಇದೀಗ ಶಿಕ್ಷಕನ ಉದ್ಧಟತನ ಎಲ್ಲೆ ಮೀರಿದ್ದು, ರೊಚ್ಚಿಗೆದ್ದಿರುವ ಗ್ರಾಮಸ್ಥರು ತಪ್ಪಿತಸ್ಥ ಶಿಕ್ಷಕ ಆಜ್ಗರಲಿ ಖಾನ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಏನು ಆಗಲ್ಲ ಅನ್ನೋ ನಂಬಿಕೆ….ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

ಸರ್ಕಾರಿ ಕೆಲ್ಸ ಗಿಟ್ಟಿಸಿಕೊಳ್ಳಲು ನಾನಾ ತಂತ್ರ! ನಿನ್ನೆ ಒಳಉಡುಪಲ್ಲಿ 5 ಕೆಜಿ ತೂಕದ ಕಲ್ಲು, ಇಂದು ಗೋಧಿ ಹಿಟ್ಟು

ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen − 11 =
Remember me
