| ರಮೇಶ ಜಹಗೀರದಾರ್ ದಾವಣಗೆರೆಇದು ಡಿಜಿಟಲ್ ಯುಗ. ಎಲ್ಲದಕ್ಕೂ ತಂತ್ರಜ್ಞಾನವೇ ಕೀಲಿಕೈ. ಅದನ್ನು ಬಳಸಿ ಅಂಗೈಯಲ್ಲೇ ಅರಮನೆ ನಿರ್ವಿುಸಬಹುದು. ಇಂಥದ್ದೇ ‘ಡಿಜಿಟಲ್ ಟ್ವಿನ್’ ಉಪಯೋಗಿಸಿ ಸಿಂಗಾಪುರ ಮಾದರಿಯಲ್ಲಿ ಕನಸಿನ ದಾವಣಗೆರೆ ಕಟ್ಟುವ ಪ್ರಯತ್ನವೊಂದು ನಡೆದಿದೆ.
ಬೆರಳೆಣಿಕೆ ದೇಶಗಳಲ್ಲಿ ಮಾತ್ರ ಇರುವ ಈ ತಂತ್ರಜ್ಞಾನ ಬಳಸಿಕೊಂಡು ದಾವಣಗೆರೆಯ ತದ್ರೂಪಿ ಮಾದರಿ ಸೃಷ್ಟಿಸಿ ಇಡೀ ಊರಿನ ಜಾತಕ ತೆರೆದಿಡಬಹುದು. ಕೂತಲ್ಲೇ ಕ್ರಿಯಾಯೋಜನೆ ತಯಾರಿಸಬಹುದು. ಕೈಗೆತ್ತಿಕೊಳ್ಳಬೇಕಾದ ಕಾಮಗಾರಿ ಕಾರ್ಯಸಾಧ್ಯತೆ ಅಂದಾಜಿಸಬಹುದು.
ದಾವಣಗೆರೆಯ ವರ್ಚುವಲ್ ಮಾದರಿ ತಯಾರಿಸಿ ಆನಂತರ ಇಂಟರ್​ನೆಟ್ ಸಹಾಯದಿಂದ ದತ್ತಾಂಶಗಳನ್ನು ಸಂಗ್ರಹಿಸಿ ಅಳವಡಿಸಲಾಗುತ್ತದೆ. ಇದರೊಟ್ಟಿಗೆ ಕೃತಕ ಬುದ್ಧಿಮತ್ತೆ ಸ್ಪರ್ಶವೂ ಇರಲಿದೆ. ರಸ್ತೆಗಳ ವಿಸ್ತರಣೆ, ಚರಂಡಿ, ಫ್ಲೈಓವರ್,ಆಸ್ಪತ್ರೆ ಸೇರಿ ಮತ್ತಿತರ ಕೆಲಸಗಳಿಗೆ ಕ್ರಿಯಾಯೋಜನೆ ತಯಾರಿಸಲು ನಿಗದಿತ ಸ್ಥಳಕ್ಕೆ ಹೋಗುವ ಅಗತ್ಯವಿಲ್ಲ. ಡಿಜಿಟಲ್ ಟ್ವಿನ್ ಇದ್ದರೆ ಕುಳಿತಲ್ಲಿಂದಲೇ ಎಲ್ಲವನ್ನೂ ಯೋಜಿಸಲು ಸಾಧ್ಯವಿದೆ. ಯೋಜನೆಗೆ ಹಣ ಹೂಡಿಕೆ ಮಾಡುವ ಮೊದಲು ಅದರ ಸಾಧಕ, ಬಾಧಕಗಳ ಅಂದಾಜು ಕಣ್ಮುಂದೆ ಸುಳಿಯುತ್ತದೆ.
ಸರ್ಕಾರಿ ಭೂಮಿ ಎಲ್ಲೆಲ್ಲಿದೆ, ನಗರದಲ್ಲಿ ಎಷ್ಟು ಹಸಿರಿದೆ, ಕುಡಿಯುವ ನೀರಿನ ಮೂಲಗಳು, ತ್ಯಾಜ್ಯ ನಿರ್ವಹಣೆ ಸವಾಲುಗಳು, ಕೊಳಚೆ ನೀರಿನ ಮರು ಬಳಕೆ, ವಾಹನಗಳ ಓಡಾಟ, ಸಂಚಾರ ದಟ್ಟಣೆ ಇಂಥ ಅನೇಕ ವಿಷಯಗಳಲ್ಲಿ ಸಮಸ್ಯೆಗಳನ್ನು ನಿವಾರಿಸಿ ಜನಸ್ನೇಹಿ ವ್ಯವಸ್ಥೆ ನಿರ್ವಣಕ್ಕೆ ಈ ತಂತ್ರಜ್ಞಾನ ನೆರವು ನೀಡಲಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿಗಳಿವೆ, ಆಸ್ತಿ ತೆರಿಗೆ ಎಷ್ಟು ಸಂಗ್ರಹವಾಗುತ್ತಿದೆ, ಎಲ್ಲಿ ಸೋರಿಕೆಯಾಗುತ್ತಿದೆ, ಹೆಚ್ಚಿನ ಆದಾಯ ತರಲು ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಈ ತಂತ್ರಜ್ಞಾನ ತಿಳಿಸುತ್ತದೆ.
ನಗರ ವ್ಯಾಪ್ತಿಯಲ್ಲಿ ಎಷ್ಟು ವಾಹನಗಳು ಸಂಚರಿಸುತ್ತವೆ. ಟ್ರಾಫಿಕ್ ಸುಧಾರಣೆಗೆ ಏನು ಮಾಡಬೇಕು. ಅಧಿಕ ಮಳೆ ಬಂದರೆ ಯಾವ ಪ್ರದೇಶಗಳಿಗೆ ನೀರು ನುಗ್ಗಬಹುದು, ಅಗ್ನಿ ಆಕಸ್ಮಿಕ ಸಂಭವಿಸಿದರೆ ಅಗ್ನಿಶಾಮಕ ವಾಹನ ಬಂದು ಹೋಗಲು ಸ್ಥಳಾವಕಾಶವಿದೆಯೆ ಇತ್ಯಾದಿ ಸಂದೇಹಗಳಿಗೆ ಉತ್ತರ ಕಂಡುಕೊಳ್ಳಲು ಡಿಜಿಟಲ್ ಟ್ವಿನ್ ಸಹಾಯ ಮಾಡುತ್ತದೆ.
ದಾವಣಗೆರೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳ ತಂಡ ಈಗಾಗಲೆ ಹಲವು ಸುತ್ತಿನ ಸಭೆ ನಡೆಸಿದೆ. ಬ್ಯಾಂಕೊಂದರ ಸಿಎಸ್​ಆರ್ ನಿಧಿ ಪಡೆವ ಪ್ರಯತ್ನವೂ ಸಾಗಿದೆ. ಆರಂಭಿಕ ಹಂತದಲ್ಲಿ 60-70 ಲಕ್ಷ ರೂ. ಬೇಕಾಗಬಹುದು. ಕೆಲ ವಾರ್ಡ್​ಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ನಗರಕ್ಕೆ ವಿಸ್ತರಿಸುವ ಆಲೋಚನೆ ಇದೆಯಂತೆ. ಸ್ಮಾರ್ಟ್​ಸಿಟಿ ಯೋಜನೆಯ ಅವಧಿ ಮುಂದಿನ ವರ್ಷ ಜೂನ್ ವೇಳೆಗೆ ಮುಕ್ತಾಯವಾಗಲಿದೆ. ಅಷ್ಟರೊಳಗೆ ಇದನ್ನು ಜಾರಿಗೆ ತರಲು ತಯಾರಿ ನಡೆದಿದೆ.
ನಗರ ಯೋಜನೆಗೆ ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬಹಳಷ್ಟು ನೆರವಾಗುತ್ತದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ರ್ಚಚಿಸಿ ನಂತರ ಜಾರಿಗೆ ತರಲಾಗುವುದು.
| ಡಾ. ಎಂ.ವಿ. ವೆಂಕಟೇಶ್ ಜಿಲ್ಲಾಧಿಕಾರಿ
ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
