ದಾವಣಗೆರೆ:ಹಾಡು ಹಗಲಲ್ಲೇ ಮಹಿಳೆಯೊಬ್ಬಳು ಲಾಂಗ್​ ಹಿಡಿದುಕೊಂಡು ಮಾರುಕಟ್ಟೆಯಲ್ಲಿ ಓಡಾಡಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ನಿವಾಸಿ ರುಕ್ಮಿಣಿ (34) ಲಾಂಗ್ ಹಿಡಿದು ಓಡಾಡಿದ ಮಹಿಳೆ. ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದ್ದು, ಈಕೆಗೆ 3 ಮಕ್ಕಳಿದ್ದಾರೆ. ಲಾಂಗ್ ಹಿಡಿದು ಓಡಾಡಿದ್ದನ್ನು ಕಂಡು ಚನ್ನಗಿರಿ ಪಟ್ಟಣದ ಜನ ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ಜರುಗಿತು.
ಇದನ್ನೂ ಓದಿರಿ:VIDEO| ಚುನಾವಣಾ ಪ್ರಚಾರದ ಕೊನೆಯ ದಿನ ರಾಷ್ಟ್ರಗೀತೆಗಾಗಿ ವ್ಹೀಲ್​ಚೇರ್​ನಿಂದ ಎದ್ದು ನಿಂತ ದೀದಿ..!
ಜೀನ್ಸ್ ಪ್ಯಾಂಟ್ ಮತ್ತು ಕೆಂಪು‌ ಜರ್ಕಿನ್ ಧರಿಸಿ ಬೀದಿ ಬೀದಿಗಳಲ್ಲಿ ಲಾಂಗ್​ ಹಿಡಿದುಕೊಂಡು ಮಹಿಳೆ ಅಡ್ಡಾಡಿದ್ದಾಳೆ. ಜೋಗಿ ಚಲನಚಿತ್ರದ ನಾಯಕನಂತೆ ಮಹಿಳೆ ಫೋಸ್ ನೀಡುತ್ತಿದ್ದಳು. ಆಟೋ ಚಾಲಕರು ಉಪಾಯವಾಗಿ ಮಹಿಳೆಯಿಂದ ಲಾಂಗ್ ಪಡೆದುಕೊಂಡರು.
ಇದಾದ ಬಳಿಕ ಆಕೆಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
Web Exclusive | ಎಲ್ಲಿ ಹೋದಳು ಅಮ್ಮ?: 3 ಮರಿಗಳನ್ನು ಬಿಟ್ಟು ಹೋದ ತಾಯಿ ಹುಲಿ ಹುಡುಕಾಟದಲ್ಲಿ ಅರಣ್ಯ ಇಲಾಖೆ

ಡೈರಿ ಆಧರಿಸಿ ವೇತನ ಭತ್ಯೆ-ಬಡ್ತಿ; ಆರೋಗ್ಯ ಇಲಾಖೆಯ ಎಲ್ಲರಿಗೂ ಇನ್ನು ದಿನಚರಿ ಬರೆಯುವುದು ಕಡ್ಡಾಯ; ಸಚಿವ ಡಾ.ಕೆ.ಸುಧಾಕರ್ ಫರ್ಮಾನು

ಏರ್​ಪೋರ್ಟ್​ ದ್ವಾರದಲ್ಲಿ ಕಾರೊಳಗೆ ಕುಳಿತು ಬೆಂಕಿ ಹಚ್ಚಿಕೊಂಡ ಚಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
