ಬೆಂಗಳೂರು:ನೂರಾರು ಕನಸಿನ ಬುತ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯ ಬಾಳಲ್ಲಿ ವಿಧಿ ಆಟವಾಡಿದೆ. ಜಾಲಿ ಟ್ರಿಪ್​ ಮುಗಿಸಿ ಮನೆಗೆ ಹಿಂತಿರುಗುವಾಗ ಮಾರ್ಗಮಧ್ಯೆ ಸಂಭವಿಸಿದ ಅಪಘಾತದಲ್ಲಿ ನವ ವಿವಾಹಿತ ಮೃತಪಟ್ಟಿದ್ದು, ಪತ್ನಿ ಸ್ಥಿತಿ ಚಿಂತಾಜನಕವಾಗಿದೆ. ಗಂಡ ಇನ್ನಿಲ್ಲ ಎಂಬ ಸುದ್ದಿಕೇಳಿ ಆಘಾತಗೊಂಡ ಪತ್ನಿ, ಸ್ಟ್ರೆಚರ್​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರುತ್ತಾ ಗೋಳಾಡುತ್ತಿದ್ದ ದೃಶ್ಯ ನೋಡಿದ್ರೆ ಮನಕಲಕುವಂತಿದೆ.
ಇಂತಹ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಹೀರೇಕೆರೂರು ಬಳಿ ಸಂಭವಿಸಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಮತ್ತು ಶೋಭಾ ದಂಪತಿ ಪುತ್ರ ಸಂಜಯ್​(28) ಮೃತ ದುರ್ದೈವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ. ಕಳೆದ ನವೆಂಬರ್​ 18ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಪ್ರೀತಿ ಎಂಬಾಕೆ ಜೊತೆ ಸಂಜಯ್​ ಮದುವೆ ನೆರವೇರಿತ್ತು. ಪ್ರೀತಿ ಕೂಡ ಇಂಜಿನಿಯರ್​.

ಮದುವೆಯಾದ 13ನೇ(ಡಿ.10) ದಿನ ನವ ದಂಪತಿ ಇಬ್ಬರೂ ಬೈಕ್​ನಲ್ಲಿ ಸಿಂಗಂದೂರು ಕ್ಷೇತ್ರಕ್ಕೆ ತೆರಳಿದ್ದರು. ಅಂದು ರಾತ್ರಿ ಮುರುಡೇಶ್ವರದಲ್ಲಿ ತಂಗಿದ್ದರು. ಡಿ.11ರಂದು ಬೆಳಗ್ಗೆ ಶಿರಸಿಯ ಮಾರಿಕಾಂಬಾ ದೇವಿ ದರ್ಶನ ಪಡೆದು ವಾಪಸ್​ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಹಿರೇಕೆರೂರು ತಾಲೂಕಿನ ಹಂಸಭಾವಿ ಕೋಟ ನಡುವೆ ರಸ್ತೆ ಬದಿ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನವದಂಪತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದೇ ದಿನ ಸಂಜಯ್​ ಕೊನೆಯುಸಿರೆಳೆದಿದ್ದಾರೆ.

ಪ್ರೀತಿಯ ಗಂಡನ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತಗೊಂಡ ಪ್ರೀತಿ, ಗಂಭೀರ ಸ್ಥಿತಿಯಲ್ಲಿದ್ದರೂ ಪತಿ ಮುಖ ನೋಡಲು ಹಂಬಲಿಸಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್​ನಲ್ಲಿ ಪ್ರೀತಿಯನ್ನು ಮಲಗಿಸಿಕೊಂಡೇ ಶವಾಗಾರದ ಬಳಿ ಕರೆತಂದಿದ್ದು, ಗಂಡನ ಮುಖ ಸವರುತ್ತಾ ಪ್ರೀತಿ ದುಃಖಿಸುತ್ತಿದ್ದ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರೀತಿಯ ಎರಡೂ ಕೈಗೂ ಗಂಭೀರ ಗಾಯವಾಗಿದ್ದು, ಮೇಲಕ್ಕೆ ಎತ್ತಲೂ ಆಗುತ್ತಿಲ್ಲ. ಅಂತಹ ಸ್ಥಿತಿಯಲ್ಲೂ ಗಂಡನ ಮುಖ ಮುಟ್ಟಲು ಪ್ರೀತಿ ಪಡುತ್ತಿದ್ದ ಕಷ್ಟ.. ಅತ್ಯಂತ ವಿಷಾದಕರ ಕ್ಷಣದ ದೃಶ್ಯ ವೈರಲ್​ ಆಗಿದ್ದು, ಜನರು ಮನದಲ್ಲೇ ವಿಧಿಗೆ ಹಿಡಿಶಾಪ ಹಾಕುತ್ತಾ ಮಮ್ಮಲ ಮರುಗಿದ್ದಾರೆ. ಸದ್ಯ ಪ್ರೀತಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿದ್ದಾರೆ. ಎರಡೂ ಮನೆಯಲ್ಲೂ ನೀರವ ಮೌನ ಆವರಿಸಿದೆ.

ಇನ್ನು ಎಲ್ಲವೂ ಚೆನ್ನಾಗಿದ್ದರೆ ನವದಂಪತಿ ಇಬ್ಬರೂ ಡಿ.12ರಂದು ಬೆಂಗಳೂರಿಗೆ ತೆರಳುತ್ತಿದ್ದರು. ಬಾಡಿಗೆ ಮನೆಯನ್ನೂ ನೋಡಿದ್ದರು. ಆದರೆ, ಅವರು ಬೆಂಗಳೂರಿಗೆ ತೆರಳುವ ಮುನ್ನಾದಿನವೇ ದುರ್ವಿಧಿ ಇವರ ಬಾಳಿಗೆ ಕೊಳ್ಳಿ ಇಟ್ಟಿದೆ.
ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್​ಗೆ ಬಾರದ ಅಪ್ಪ-ಅಮ್ಮ… ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
