ಬೆಂಗಳೂರು:ಬಾಡಿಗೆ ಮನೆ ನೋಡುವ ನೆಪದಲ್ಲಿ ಮನೆಗೆ ನುಗ್ಗಿದ ಮಹಿಳೆ ಮನೆ ಒಡತಿ ಮೇಲೆ ಹಲ್ಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಂದಿನಿ ಲೇ ಔಟ್​​ನಲ್ಲಿ ನಡೆದಿದೆ.
ಲಗ್ಗೆರೆಯ ಪಾರ್ವತಿ ನಗರದಲ್ಲಿ, ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ಮಹಿಳೆ ಈ ವೇಳೆ ಮನೆಯನ್ನು ತೋರಿಸುವಂತೆ ಹೇಳಿದ್ದಾಳೆ. ಆಗ ಮನೆ ಒಡತಿ ಶಾಂತಮ್ಮ ಮನೆ ತೋರಿಸಲು ಮುಂದಾಗಿದ್ದಾರೆ. ಮನೆ ಒಳಗೆ ಹೋಗಿದ್ದ ವೇಳೆ ಮನೆ ನೋಡಲು ಬಂದಿರುವ ಮಹಿಳೆ ಕಟ್ಟಿಗೆ ಪೀಸ್​ನಿಂದ ಮನೆ ಮಾಲೀಕಿ ಶಾಂತಮ್ಮ ತಲೆಗೆ ಹೊಡೆದಿದ್ದಾಳೆ. ಮಹಿಳೆ ರಕ್ತಸಿಕ್ತವಾಗಿ ಬೀಳುತ್ತಿದ್ದಂತೆ, ಮಹಿಳೆಯ ಕತ್ತಿ‌ನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾಳೆ.
ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ? ಆಸ್ಪತ್ರೆಗೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ
ಸದ್ಯ ಗಾಯಗೊಂಡ ಶಾಂತಮ್ಮಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸ್ಥಳಕ್ಕೆ ದೌಡಾಯಿಸಿರೋ ನಂದಿನಿ ಲೇ ಔಟ್ ಪೊಲೀಸರು, ಸದ್ಯ ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಹಲ್ಲೆ ಮಾಡಿ ಚೈನ್ ಕಸಿದು ಪರಾರಿಯಾದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹಲವು ದಿನಗಳಿಂದ ಮನೆ ಬಾಡಿಗೆ ಕೇಳೋ ನೆಪದಲ್ಲಿ ಬರ್ತಿದ್ದ ಮಹಿಳೆ, ಒಂಟಿಯಾಗಿಯೇ ಬಂದು ಮನೆ ಬಾಡಿಗೆಗೆ ಇದೆಯಾ ಅಂತ ಕೇಳುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಿಮಾನ ಹಾರಾಡುತ್ತಿದ್ದ ವೇಳೆ ದ್ವಾರ ತೆಗೆದು ಹುಚ್ಚಾಟ; ಆರೋಪಿ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − one =
Remember me
