ಬೆಂಗಳೂರು:ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ಎಸ್ಕಾಂಗಳ ಪರಿಸ್ಥಿತಿ ದಿನದಿನಕ್ಕೂ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಪುನಶ್ಚೇತನಕ್ಕಾಗಿ ಸಲಹೆ ನೀಡಲು ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಗುರುಚರಣ್ ನೇತೃತ್ವದ ಸಮಿತಿ ಪರಿಸ್ಥಿತಿ ಅಧ್ಯಯನ ನಡೆಸಿ, ಸೋಮವಾರ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಿದೆ. ಎಸ್ಕಾಂಗಳ ಆದಾಯ ಹೆಚ್ಚಳಕ್ಕೆ ಇರುವ ದಾರಿಗಳು ಮತ್ತು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.
ಟಾರಿಫ್, ತೆರಿಗೆ ಸಂಗ್ರಹ, ವಿತರಣಾ ವ್ಯವಸ್ಥೆ, ಹಣ ಕ್ರೋಡೀಕರಣದ ದಾರಿಗಳ ಕುರಿತು ಅವರು ವರದಿಯಲ್ಲಿ ತಿಳಿಸಿದ್ದು, ಕೆಲವು ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದನ್ನು ಒತ್ತಿ ಹೇಳಿದ್ದಾರೆ. ಮುಖ್ಯವಾಗಿ ರೈತರ ಐಪಿ ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಇಲ್ಲಿ ಡಿಬಿಟಿ ವ್ಯವಸ್ಥೆ ತನ್ನಿ.
ಪಾರದರ್ಶಕ, ಹೊಣೆಗಾರಿಕೆಯನ್ನು ಸುಧಾರಿಸಿ, ವಿಳಂಬವನ್ನು ಕಡಿಮೆ ಮಾಡಿ ರೈತರಿಗೆ ಪರಿಣಾಮಕಾರಿಯಾಗಿ ಸಬ್ಸಿಡಿ ತಲುಪಿಸುವ ವ್ಯವಸ್ಥೆ ಮಾಡಿದರೆ ನಷ್ಟ ಕಡಿಮೆಯಾಗಲಿದೆ. ನೈಜ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕೃಷಿ ಫೀಡರ್​ಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಸಲಹೆ ನೀಡಲಾಗಿದೆ ಮತ್ತು ಪಿಎಂ ಕುಸುಮ್ (ಪ್ರಧಾನಮಂತ್ರಿ ಕಿಸಾನ್ ಊರ್ಜ ಸುರಕ್ಷಾ ಉತ್ಥಾನ ಮಹಾಭಿಯಾನ) ಯೋಜನೆ ಜಾರಿ ಮಾಡುವಂತೆ ಹೇಳಲಾಗಿದೆ.
ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವರದಿಯ ಶಿಫಾರಸುಗಳ ಅನುಷ್ಠಾನದ ಸಂದರ್ಭದಲ್ಲಿ ಅವರ ಸಲಹೆ, ಮಾರ್ಗದರ್ಶನ ಪಡೆಯಲು ಅನುವಾಗುವಂತೆ ಸಮಿತಿ ಅವಧಿಯನ್ನು ವಿಸ್ತರಿಸುವಂತೆ ಸೂಚಿಸಿದರು.
ಈ ವರದಿಯಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳ ವಸ್ತುಸ್ಥಿತಿ, ಸುಧಾರಣೆಗಳ ಅಗತ್ಯತೆ ಮತ್ತು ಅನುಷ್ಠಾನ ಯೋಜನೆಯ ಬಗ್ಗೆ ಸವಿಸ್ಥಾರ ವಿವರಣೆಗಳನ್ನು ನೀಡುವುದರೊಂದಿಗೆ ರಚನಾತ್ಮಕ ಬದಲಾವಣೆ, ಮಧ್ಯಮ ಮತ್ತು ದೀರ್ಘಾವಧಿಯ ಸುಧಾರಣೆ, ಈ ಸುಧಾರಣೆಗಳ ಸಕಾಲಿಕ ಅನುಷ್ಠಾನದ ಬಗ್ಗೆ ನಿಖರವಾಗಿ ತಿಳಿಸಲಾಗಿದೆ.
ಇಂಧನ ಸಚಿವ ವಿ.ಸುನಿಲ್ ಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಚ್ಚರಿಕೆ:ಎಚ್​ಟಿ ಸೇಲ್ಸ್​ನ ಟ್ರೆಂಡ್ ಸರ್ಕಾರಕ್ಕೆ ಮತ್ತು ಎಸ್ಕಾಂಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಇದೇ ಟ್ರೆಂಡ್ ಮುಂದುವರಿದು ಸರ್ಕಾರ ಮಧ್ಯ ಪ್ರವೇಶ ಮಾಡದೇ ಹೋದಲ್ಲಿ ಎಸ್ಕಾಂಗಳು ಭವಿಷ್ಯದಲ್ಲಿ ಎಚ್​ಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ. ಹೀಗಾದರೆ ಎಸ್ಕಾಂಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ವರದಿಯಲ್ಲಿ ಸೂಚ್ಯವಾಗಿ ಎಚ್ಚರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 17 =
Remember me
