ಬೆಂಗಳೂರು:ಸದಾ ಗಡಿಯಾರದತ್ತಲೇ ಗಮನವಿಡಬೇಡಿ, ಮನಸ್ಸಿಟ್ಟು‌ ಕೆಲಸ ಮಾಡಿ. ಮಕ್ಕಿ ಕಾ ಮಕ್ಕಿಯಂತೆ ಇರಬೇಡಿ. ಇಂತಹ ಧೋರಣೆಯಿಂದ ಯಾವುದೇ ಪ್ರಯೋಜನವಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳುವ ಮೂಲಕ ಜಿಲ್ಲಾಧಿಕಾರಿಗಳಿಗೆ ಬೂಸ್ಟರ್ ಡೋಸ್ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಡಿಸಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಅವಧಿಯ ಚುನಾಯಿತ ಸರ್ಕಾರದ ಕೊನೆಯ ವರ್ಷವಿದು. ಜಿಲ್ಲಾ ಹಂತದಲ್ಲಿ ಡಿಸಿ, ಸಿಇಒಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅದಕ್ಕಿಂತಲೂ ಮುಖ್ಯವಾಗಿ ದೀನ-ದಲಿತರು, ಜನಸಾಮಾನ್ಯರ ಅಹವಾಲಿಗೆ ಸ್ಪಂದನೆ, ಜನಪರ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸಬೇಕು ಎಂದು ತಾಕೀತು ಮಾಡಿದರು.
ಗ್ರಾಮ ಒನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅನುಷ್ಠಾನ ವಿಳಂಬವಾಗುತ್ತಿದೆ‌ ಎಂದು ಬೊಮ್ಮಾಯಿ‌ ಗರಂ ಆದರಲ್ಲದೆ, ಸಕಾಲ ಯೋಜನೆ ಬಗ್ಗೆ ಉದಾಸೀನತೆ ಎದ್ದು‌ಕಾಣುತ್ತಿದೆ. ಕೆಳ ಹಂತದ ಅಧಿಕಾರಿಗಳು ನೋಡಿಲ್ಲ, ಮಾಡಿಲ್ಲ ಎಂಬ ಸಬೂಬು ಕೇಳುವುದಿಲ್ಲ. ಸಮಯದ ಪರಿವೆಯಿಲ್ಲದೆ ಕೆಲಸ ಮಾಡಿ, ನಿಮಗಾಗದಿದ್ದರೆ ನಿಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಹುಷಾರ್ ಎಂದು ಖಡಕ್ ಧ್ವನಿಯಲ್ಲಿ ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.
ಆನ್​ಲೈನ್​ ಶಿಕ್ಷಣ: 3 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್​ ವಿತರಿಸಿದ ಹರಿಯಾಣ ಸರ್ಕಾರ

ಮದರ್ಸ್​ ಡೇ ದಿನದಂದೇ ಮಗುವಿನ ಜತೆ ಮೊದಲ ಫೋಟೋ ಹಂಚಿಕೊಂಡ ನಟಿ ಕಾಜಲ್​ ಅಗರ್​ವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
