ಬೆಂಗಳೂರು:ವರ್ಷದಿಂದ ವರ್ಷಕ್ಕೆ ಮಳೆಗಾಲದ ಪ್ರವಾಹವು ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ವೈವಿಧ್ಯಮಯ ಸಸ್ಯ ಸಂಕುಲಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಇದಲ್ಲದೆ, ಉದ್ಯಾನದಿಂದ ಹರಿಯುವ ಹೆಚ್ಚುವರಿ ಮಳೆನೀರು ಮಹಾಮಳೆಯ ನೀರಿನೊಂದಿಗೆ ಬೆರೆಯುತ್ತದೆ ಮತ್ತು ಆ ಪ್ರಕ್ರಿಯೆಯಲ್ಲಿ ಮಾಲಿನ್ಯಕಾರಕಗಳನ್ನು ಹರಡುತ್ತದೆ.
ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಲುವಾಗಿ, ಫ್ರೆಂಡ್ಸ್ ಆಫ್ ಲೇಕ್ಸ್, ಬಯೋಮ್ ಫೌಂಡೇಶನ್, ಇಂಡಿಯಾ ಕೇರ್ಸ್ ಫೌಂಡೇಶನ್ ಮತ್ತು ಡಿಸಿಬಿ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದ ಮೂಲಕ ಮಳೆನೀರು ಪ್ರೇರಿತ ಪ್ರವಾಹದ ಪರಿಣಾಮವನ್ನು ತಗ್ಗಿಸಲು ಯೋಜನೆಯನ್ನು ರೂಪಿಸಿವೆ. ಈ ಪರಿವರ್ತಕ ಯೋಜನೆಯು, ತೋಟಗಾರಿಕೆ ಇಲಾಖೆಯು ಒಳಗೊಂಡಿರುವ ಸಹಯೋಗದ ಪ್ರಯತ್ನವಾಗಿದ್ದು, ಜಲ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿ, ಸುಸ್ಥಿರ ನಗರಗಳು ಮತ್ತು ಹವಾಮಾನ ಕ್ರಿಯೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಯುಎನ್ ಎಸ್ ಡಿಜಿಗಳು) ಸಾಧಿಸುವ ಗುರಿಯನ್ನು ಹೊಂದಿದೆ.
ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್, 240 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು 1,854ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಪರಿಣಾಮಕಾರಿ ಸಂಗ್ರಹವನ್ನು ಹೊಂದಿದೆ. ಅನಿಯಮಿತ ಹವಾಮಾನದ ಮಾದರಿಗಳು ಮತ್ತು ಇತ್ತೀಚಿನ ವರ್ಷಗಳಲ್ಲಿ ಮಳೆಯಿಂದ ಉಂಟಾಗುವ ಪ್ರವಾಹದಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ. ಇದರ ಪರಿಣಾಮವೆಂದರೆ ನೀರಿನ ನಿಂತುಕೊಳ್ಳುವಿಕೆ, ಅದರಿಂದ ಉದ್ಯಾನದೊಳಗಿನ ಪ್ರವಾಹಕ್ಕೆ ಹೊಂದಿಕೊಳ್ಳದ ಮರಗಳ ಕ್ರಮೇಣ ಕೊಳೆಯುವಿಕೆಗೆ ಕಾರಣವಾಗಬಹುದು.
ಸಾಂಪ್ರದಾಯಿಕ ತೆರೆದ ಬಾವಿಯ ನಿರ್ಮಾಣ ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವಾಗಿದೆ. ಈ ಬಾವಿ, 25 ಅಡಿ ವ್ಯಾಸ ಮತ್ತು ಕನಿಷ್ಠ 40 ಅಡಿ ಆಳ ಇದ್ದು, ಬಹು ಉದ್ದೇಶಗಳನ್ನು ಪೂರೈಸುತ್ತದೆ. ಪ್ರಾಥಮಿಕವಾಗಿ, ಭಾರೀ ಮಳೆಯ ಸಮಯದಲ್ಲಿ ಹೆಚ್ಚುವರಿ ಮಳೆನೀರನ್ನು ನಿರ್ವಹಿಸಲು ಇದು ಜಲಾಶಯದಂತೆ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ನೀರು ನಿಲ್ಲುವಿಕೆಯನ್ನು ತಗ್ಗಿಸುತ್ತದೆ ಮತ್ತು ಸಂಭವನೀಯ ಕೊಳೆಯುವಿಕೆಯಿಂದ ಉದ್ಯಾನದೊಳಗಿನ ಬೆಳೆಯಬೇಕಾದ ಮರಗಳನ್ನು ರಕ್ಷಿಸುತ್ತದೆ. ಇದರ ಜೊತೆಗೆ, ಈ ಉಪಕ್ರಮವು ಅಂತರ್ಜಲದ ಮರುಪೂರಣವನ್ನು ಖಾತ್ರಿಗೊಳಿಸುತ್ತದೆ, ಅದನ್ನು ನಂತರ ಉದ್ಯಾನದ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.
ಇದಲ್ಲದೆ, ಡಿಸಿಬಿ ಬ್ಯಾಂಕ್‌ನ ಈ ಕಾರ್ಯಕ್ರಮವು ಸಾಂಪ್ರದಾಯಿಕ ಬಾವಿ ತೋಡುವವರು ಮತ್ತು ಅವರ ಕುಟುಂಬಗಳ ಜೀವನೋಪಾಯವನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಪಾಲಿಸುವ ಉದ್ದೇಶವನ್ನು ಒಳಗೊಂಡಿದೆ. ಈ ಕಾರ್ಯಕ್ಕೆ ಸುಮಾರು ಹನ್ನೆರಡು ಮಂದಿ ಬಾವಿ ತೋಡುವವರನ್ನು ನೇಮಿಸಿಕೊಳ್ಳಲಾಗುತ್ತದೆ. ನಿರ್ಮಾಣ ಕಾರ್ಯದ ಸಮಯದಲ್ಲಿ ಅವರ ಕುಟುಂಬಗಳಿಗೆ ಜೀವನೋಪಾಯದ ಸಾಧನವಾಗಿ ರೂಪುಗೊಳ್ಳುತ್ತದೆ, ಮತ್ತು ಅವರ ಕುಟುಂಬಗಳನ್ನು ಪೋಷಿಸುವ ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಈ ಯೋಜನೆಯು ಲಾಲ್‌ಬಾಗ್ ಮತ್ತು ಸಾಂಪ್ರದಾಯಿಕ ಬಾವಿ ತೋಡುವವರ ಗೆಲುವಾಗಿದೆ. ಉದ್ಯಾನವು ನೀರಿನ ಸುಧಾರಿತ ನಿರ್ವಹಣೆ ಮತ್ತು ಮರಗಳ ಸಂರಕ್ಷಣೆಯಿಂದ ಪ್ರಯೋಜನ ಗಳಿಸುತ್ತದೆ, ಇದು ಪರಿಸರದ ಪ್ರಮುಖ ಆಸ್ತಿಯಾಗಿ ಅದರ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಜೊತೆಗೆ, ಬಾವಿ-ತೋಡಿದವರು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಎಲ್ಲರಿಗೂ ಯೋಗ್ಯವಾದ ಕೆಲಸ ಎಂಬ ಯುಎನ್‌ನ ದೂರದೃಷ್ಟಿಗೆ ಪೂರಕವಾಗಿ ಸಾಗುತ್ತಾರೆ.
ವಿಶ್ವವು ಯುಎನ್‌ಎಸ್‌ಡಿಜಿ (ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವಲಪ್‌ಮೆಂಟ್ ಗ್ರೂಪ್) ಗುರಿಗಳನ್ನು ಸಾಧಿಸುವ ಸಾಗುತ್ತಿರುವಾಗ, ಆರ್ಥಿಕ ಅಭಿವೃದ್ಧಿ ಮತ್ತು ಸುಸ್ಥಿರ ನಗರೀಕರಣವನ್ನು ಉತ್ತೇಜಿಸುವ ಸಂದರ್ಭದಲ್ಲಿ ಎದುರಾಗುವ ಪರಿಸರ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದಕ್ಕೆ ಈ ಯೋಜನೆಯು ಗಮನಾರ್ಹ ಉದಾಹರಣೆಯಾಗಿದೆ. ಮಳೆನೀರಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಮತ್ತು ವೈವಿಧ್ಯಮಯ ಪಾಲುದಾರರ ಜೊತೆಗೆ ಸಹಯೋಗವನ್ನು ಬೆಳೆಸುವ ಮೂಲಕ, ಈ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಉಪಕ್ರಮವು ನಮ್ಮ ಗ್ರಹವನ್ನು ರಕ್ಷಿಸುವಲ್ಲಿ ಮತ್ತು ಚೇತರಿಸಿಕೊಳ್ಳುವ ಸಮುದಾಯಗಳನ್ನು ನಿರ್ಮಿಸುವುದಕ್ಕೆ ಕಾರ್ಪೊರೇಟ್, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಸರ್ಕಾರದ ನಡುವಿನ ಸಾಮೂಹಿಕ ಕೆಲಸ ಕಾರ್ಯಗಳು ಮತ್ತು ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಅಂದು ಇಂದಿರಾಗಾಂಧಿ ಭದ್ರತಾ ಉಸ್ತುವಾರಿ, ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದ ಇಂದು ಮಿಜೋರಾಂ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
