ಬೆಂಗಳೂರು:ರಾಜ್ಯದ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಲಾಕ್​ಡೌನ್​ ಅವಧಿಯ ವೇತನ ನೀಡಲು ಕಾಲೇಜು ಶಿಕ್ಷಣ ಇಲಾಖೆ 43.03 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2020ರ ಮಾರ್ಚ್​ 24ರಿಂದ 2020ರ ಆಗಸ್ಟ್​ 31ರ ವರೆಗಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಲು ಇಲಾಖೆ ಒಟ್ಟಾರೆಯಾಗಿ 43.03 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಅತಿಥಿ ಉಪನ್ಯಾಸಕರಿಗೆ ಮಾಸಿಕ 13 ಸಾವಿರ ರೂ.ನಂತೆ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿ ಅತಿಥಿ ಉಪನ್ಯಾಸಕರಾದವರೆಗೆ ಮಾಸಿಕ 11 ಸಾವಿರ ರೂ. ಪಾವತಿಸಬೇಕು. ಇಲಾಖೆ ರ್ನಿದಿಷ್ಟ ಅವಧಿಗೆ ಬಿಡುಗಡೆ ಮಾಡಿರುವ ಗೌರವ ಧನವನ್ನು ಅದೇ ಅವಧಿಗೆ ಸೀಮಿತವಾಗಿ ಪಾವತಿ ಮಾಡಬೇಕು. ಬೇರೆ ಅವಧಿಗೆ ಗೌರವಧನ ಪಾವತಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಬಿಡುಗಡೆಯಾಗಿರುವ ಅನುದಾನವನ್ನು ಕಾಲೇಜಿನಲ್ಲೇ ಉಳಿಸಿಕೊಳ್ಳುವಂತಿಲ್ಲ. ಈ ಬಗ್ಗೆ ಅತಿಥಿ ಉಪನ್ಯಾಸಕರಿಂದ ದೂರು ಬಂದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಡಿ.12ರೊಳಗೆ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಿ, ಅನುದಾನ ಬಳಕೆ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸಬೇಕು ಎಂದು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಅಂದಾಜು 14 ಸಾವಿರ ಅತಿಥಿ ಉಪನ್ಯಾಸಕರು ಲಾನುಭವಿಗಳಾಗಲಿದ್ದಾರೆ.
‘ಎಲ್ಲಿಂದ ಶುರು ಮಾಡಲಿ?’ ಎಂದು ಕೇಳಿದ್ದಾರೆ ನಟಿ ಸನ್ನಿ ಲಿಯೋನ್​; ಯಾಕಿರಬಹುದು?

ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

‘ಲಸಿಕೆ ತೆಗೆದುಕೊಂಡರೆ ಕರೊನಾ ಬರಲ್ವಾ?’ ಅಂತ ಕೇಳಿದ್ರೆ, ಅದಿನ್ನೂ ಗ್ಯಾರಂಟಿ ಇಲ್ಲ ಅಂದ್ರಂತೆ!; ಔಷಧ ಕಂಪನಿಯವರೇ ಹಿಂಗಂದ್ರೆ ಹೆಂಗೆ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
