ಬೆಂಗಳೂರುಡಿಪ್ಲೊಮಾ ಪಾಸಾದವರಿಗೆ ಇಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸಲು ಡಿಸಿಇಟಿ-24 ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಶನಿವಾರ ನಡೆಸಿದ ವೆಬ್ ಕಾಸ್ಟಿಂಗ್ ಯಶಸ್ವಿಯಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬೆಂಗಳೂರು ಸೇರಿ ವಿವಿಧ 12 ಜಿಲ್ಲೆಗಳ 37 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಧ್ಯಾಹ್ನ 2ರಿಂದ 5ರವರೆಗೆ ನಡೆಸಿತು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ಒಟ್ಟು 18,215 ವಿದ್ಯಾರ್ಥಿಗಳ ಪೈಕಿ ಶೇ.96 ಅಭ್ಯರ್ಥಿಗಳು ಹಾಜರಾಗಿದ್ದರು. ವೆಬ್‌ಕ್ಯಾಸ್ಟಿಂಗ್ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಮ್ಮ ಕಚೇರಿಯಿಂದಲೇ ನಡೆಸಿದರು.
ಇದೇ ಮೊದಲ ಸಲ ಪ್ರಾಯೋಗಿಕವಾಗಿ ನಡೆದ ವೆಬ್ ಕ್ಯಾಸ್ಟಿಂಗ್, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆಯುವ ಪ್ರಕ್ರಿಯೆಗೆ ಸೀಮಿತವಾಗಿತ್ತು. ಪರೀಕ್ಷಾ ಸಮಯಕ್ಕಿಂತ ಮುಂಚೆ ಆಯಾ ಜಿಲ್ಲಾ ಖಜಾನೆಗಳಿಂದ ಬರುವ ಪ್ರಶ್ನೆಪತ್ರಿಕೆಗಳ ಮತ್ತು ಒಎಂಆರ್ ಸೀಟುಗಳ ಬಂಡಲ್ಗಳನ್ನು ತಕ್ಷಣವೇ ಪ್ರಾಂಶುಪಾಲರ ಕೊಠಡಿಯ ಕಪಾಟಿನಲ್ಲಿ ಸೀಲ್ ಮಾಡಿ ಇಡಬೇಕೆಂಬುದು ನಿಯಮ. ಇದನ್ನು ಯಾವುದೇ ಕಾರಣಕ್ಕೂ ಪರೀಕ್ಷೆ ಆರಂಭವಾಗುವ 20 ನಿಮಿಷಕ್ಕಿಂತ ಮುಂಚೆ ಹೊರಕ್ಕೆ ತೆಗೆಯಬಾರದು ಎಂಬ ಸೂಚನೆ ನೀಡಲಾಗಿತ್ತು.
ಬಂಡಲ್ ಅನ್ನು ಬಾಗಲಕೋಟೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರು ಮೇಜಿನ ಮೇಲೆ ಇರಿಸಿದ್ದನ್ನು ಗಮನಿಸಿದ ಪ್ರಸನ್ನ ಅವರು, ಅದನ್ನು 1.40ರವರೆಗೆ ಕಪಾಟಿನ ಒಳಗೆ ಇರುವಂತೆ ಸೂಚಿಸಿದರು.
ಇದೇ ರೀತಿ ಸಣ್ಣಪುಟ್ಟ ದೋಷಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸುವ ಕೆಲಸ ನಡೆಯಿತು. ಎಲ್ಲಿಯೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಯಶಸ್ವಿಯಾಗಿ ನಡೆಯಿತು.ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ತಂದು ಕೊಡುವ ವ್ಯವಸ್ಥೆ ಮೇಲೂ ನಿಗಾ ವಹಿಸಲಾಯಿತು.
ಮುಂಬರುವ ದಿನಗಳಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಪ್ರಕ್ರಿಯೆಯನ್ನೂ ವೆಬ್ ಕ್ಯಾಸ್ಟಿಂಗ್ಗೆ ಒಳಪಡಿಸಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದು.– ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 − 9 =
Remember me
