ಬೆಂಗಳೂರು:ಸಚಿವ ಸಂಪುಟ ರಚನೆಯ ಬಳಿಕ ಇದೀಗ ಕಾಂಗ್ರೆಸ್​ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿಗಳ ನೇಮಕಕ್ಕೆ ಕಸರತ್ತು ನಡೆಯುತ್ತಿದೆ. ಜಿಲ್ಲೆಗಳ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ? ಸಚಿವರುಗಳಿಗೆ ತವರು ಕ್ಷೇತ್ರದ ಜವಾಬ್ದಾರಿಯನ್ನೇ ನೀಡುತ್ತಾರಾ? ಅಥವಾ ಬದಲಾವಣೆ ಮಾಡುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು​ ಸುಳಿವೊಂದನ್ನು ನೀಡಿದ್ದಾರೆ. ಅಲ್ಲದೆ, ಉಸ್ತುವಾರಿ ನೇಮಕದಲ್ಲೂ ಅವರ ಪ್ರಭಾವವೇ ಹೆಚ್ಚಿರಲಿದೆ ಎಂಬ ಸುಳಿವು ದೊರಕಿದೆ.
ಇದನ್ನೂ ಓದಿ:ಎರಡು ಭವಿಷ್ಯವಾಣಿ ನಿಜವಾಗಿವೆ, ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದೆ: ಕೋಡಿಶ್ರೀ ಭವಿಷ್ಯ
ಡಿಸಿಎಂ ಡಿಕೆಶಿ ಇಂದು ಬಿಎಂಟಿಸಿ ಬಸ್​ನಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದರು. ಯಮಲೂರು, ದೊಮ್ಮಲೂರು, ಬೆಳಂದೂರು ಹಾಗೂ ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಕೆಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೂ ಭೇಟಿ ನೀಡಿದರು. ಮುಂಗಾರು ಆರಂಭದ ಹಿನ್ನಲೆ ಡಿಕೆಶಿ ಭೇಟಿ ಮಹತ್ವ ಪಡೆದುಕೊಂಡಿದೆ.
ಸಿಟಿ ರೌಂಡ್ಸ್​ ನಡುವೆಯೇ ಜಿಲ್ಲಾ ಉಸ್ತುವಾರಿ ನೇಮಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆಶಿ, ಫೋನ್​ ಮೂಲಕವೇ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಕೋಲಾರಕ್ಕೆ ರಾಮಲಿಂಗಾರೆಡ್ಡಿ, ಉಡುಪಿಗೆ ದಿನೇಶ್​ ಗುಂಡೂರಾವ್​, ಮಂಗಳೂರಿಗೆ ಕೃಷ್ಣ ಬೈರೇಗೌಡ ಹಾಗೂ ರಾಮನಗರಕ್ಕೆ ಬೈರತಿ ಸುರೇಶ್​ ನೇಮಕ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದ ಸಚಿವರುಗಳನ್ನು ಬೇರೆ ಜಿಲ್ಲೆಗಳ ಉಸ್ತುವಾರಿಯಗಳನ್ನಾಗಿ ನೇಮಿಸಲು ಸಿಎಂಗೆ ಡಿಕೆಶಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ:ಗಂಡಿಲ್ಲದೇ ಗರ್ಭ ಧರಿಸಿದ ಮೊಸಳೆ-ಸ್ವಯಂ ಸಂತಾನೋತ್ಪತ್ತಿ ಸಿದ್ಧಾಂತಕ್ಕೆ ಪುರಾವೆ ಎಂದ ಸಂಶೋಧಕರು
ಕಾಂಗ್ರೆಸ್​ ಹೈಕಮಾಂಡ್​ ಜತೆ ನಿಕಟ ಸಂಬಂಧ ಹೊಂದಿರುವ ಡಿಕೆಶಿ ಆರಂಭದಿಂದಲೂ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರುತ್ತಾ ಬರುತ್ತಿದ್ದಾರೆ. ಒಂದೇ ಒಂದು ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದು, ಅದನ್ನು ಸಾಧಿಸಿದರು. ಬೆಂಗಳೂರು ನಗರ ಜವಾಬ್ದಾರಿಯನ್ನೂ ಪಡೆದುಕೊಂಡರು. ಸಚಿವ ಸಂಪುಟ ವಿಸ್ತರಣೆಯಲ್ಲೂ ತಮ್ಮ ಪ್ರಭಾವ ಬೀರಿದರು. ಇದೀಗ ಉಸ್ತುವಾರಿ ನೇಮಕ ವಿಚಾರಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗುತ್ತಿದೆ. ಉಸ್ತುವಾರಿಗಳ ರುವಾರಿ ಆಗಲಿದ್ದಾರಾ ಡಿಕೆಶಿ? ಡಿಕೆಶಿ ಹೇಳಿದವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗುತ್ತಾ? ಎಂಬ ಕುತೂಹಲ ಮೂಡಿದೆ. ಸಿಎಂಗೆ ಸಿಟಿ ರೌಂಡ್ಸ್​ ನಡುವೆ ಉಸ್ತುವಾರಿಗಳ ನೇಮಕ ಸಲಹೆಗಳನ್ನು ನೀಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.(ದಿಗ್ವಿಜಯ ನ್ಯೂಸ್​)
ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಗೊಂದಲ ತಂದಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿಕೆ

ಬಾಡಿಗೆದಾರರಿಗೂ ಗೃಹ ಜ್ಯೋತಿ ಅನ್ವಯಿಸಲು ಅಧಿಕಾರಿಗಳಿಗೆ ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 6 =
Remember me
