ಬೆಂಗಳೂರು:ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೂ ಅವರ ಹೃದಯ ಶ್ರೀಮಂತಿಕೆ ತುಂಬಾ ದೊಡ್ಡದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.
ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ, ಎಲ್ಲರ ನೆಚ್ಚಿನ ಲೀಲಮ್ಮ ಇಂದು ಸಂಜೆ ವಯೋಸಹಜ ಕಾಯಿಲೆಯಿಂದ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸುಮಾರು ಹದಿನೈದು ದಿನಗಳ ಹಿಂದೆ ಲೀಲಾವತಿ ಅವರು ನನ್ನ ಮನೆಗೆ ಬಂದಿದ್ದರು. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಆಹ್ವಾನ ಮಾಡುವುದಕ್ಕೆ ಬಂದಿದ್ದರು. ನಾನೊಂದು ಪಶುವೈದ್ಯಕೀಯ ಆಸ್ಪತ್ರೆ ನಿರ್ಮಿಸಿದ್ದೇನೆ, ನೀವು ಉದ್ಘಾಟನೆ ಮಾಡಬೇಕು ಅಂತಾ ಆಹ್ವಾನಿಸಿದರು. ಅಂದು ಅವರು ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅವರ ಮಗ ಕೂಡ ಜತೆಗೆ ಬಂದಿದ್ದರು. ಎಷ್ಟೆ ಒತ್ತಡ ಇದ್ದರೂ ಚುನಾವಣೆ ಮಧ್ಯದಲ್ಲಿ ನಾನು ಉದ್ಘಾಟನೆ ಮಾಡಿ ಬಂದೆ ಎಂದರು.
ಅವರೇನು ದೊಡ್ಡ ಶ್ರೀಮಂತರಲ್ಲ ಮತ್ತು ಅನುಕೂಲಸ್ತರಲ್ಲ ಆದರೆ, ಅವರ ಮಾನವೀಯತೆಯನ್ನು ನಾವು ಲೆಕ್ಕಹಾಕಬೇಕಿದೆ. ಜನರಿಗೆ ಅನುಕೂಲವಾಗಲಿ ಅಂತಾ ಪಶುವೈದ್ಯಶಾಲೆಯನ್ನು ಕಟ್ಟಿಕೊಟ್ಟಿದ್ದಾರೆ. ಅವರು ತುಂಬಾ ಸರಳವಾಗಿ ಬದುಕುತ್ತಿದ್ದರು. 40 ವರ್ಷಗಳಿಂದ ಆತ್ಮೀಯತೆ ಇತ್ತು. ನಾನು ಮೊದಲ ಬಾರಿಗೆ ಜೈಲು ಮಂತ್ರಿಯಾಗಿದ್ದು, ಜೈಲಲ್ಲಿ ಶೂಟಿಂಗ್​ ಮಾಡಲು ಅನುಮತಿ ಕೋರುವಂತಹ ಸಂದರ್ಭದಲ್ಲಿ ಅವರ ಕುಟುಂಬದ ಅನೇಕ ಸಂಗತಿಗಳನ್ನು ಹೇಳಿಕೊಂಡಿದ್ದರು ಎಂದು ಹೇಳಿದರು.
ಚಿತ್ರರಂಗದಲ್ಲಿ ಪಟ್ಟಂತಹ ಕಷ್ಟ, ಕುಟುಂಬದ ನೋವು ನಲಿವುಗಳು, ಚಿತ್ರರಂಗದಲ್ಲಿ ತಮಗೆ ಬಂದ ಪುರಸ್ಕಾರಗಳು, ಮಗನ ಯಶಸ್ಸಿಗಾಗಿ ಮಾಡಿದ ಪ್ರಯತ್ನಗಳು ಸೇರಿದಂತೆ ಎಲ್ಲವನ್ನು ನನ್ನೊಂದಿಗೆ ಹಂಚಿಕೊಂಡರು. ಅಲ್ಲದೆ, ಮಗನ ಬೆಳವಣಿಗೆಯನ್ನು ಸಹಿಸಲಾರದೇ ಅವರ ವಿರುದ್ಧ ನಡೆದ ದೊಡ್ಡ ಪಿತೂರಿಗಳ ಬಗ್ಗೆಯೂ ಹೇಳಿದರು. ಅದೆಲ್ಲ ಈಗ ನೆನಪಾಗುತ್ತಿದೆ. ಆದರೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಏಕೆಂದರೆ, ಅದು ಬೇರೆಯವರ ಮೇಲೆ ಪರಿಣಾಮ ಬೀರಬಹುದು ಎಂದು ಡಿಕೆಶಿ ಹೇಳಿದರು.
ಲೀಲಾವತಿಯವರ ಹೃದಯ ಶ್ರೀಮಂತಿಕೆ ತುಂಬಾ ದೊಡ್ಡದು. ಇಂದು ಅವರು ನಮ್ಮ ನಡುವೆ ಇಲ್ಲ. ಆದರೆ, ಅವರ ನೂರಾರು ಸಿನಿಮಾಗಳ ಅಭಿಯನಗಳು ಇಂದಿಗೂ ಅಚ್ಚಳಿಯದೇ ಉಳಿದುಕೊಂಡಿವೆ. ಅವರು ಮಾಡಿದಂತಹ ದಾನ, ಧರ್ಮ ಹಾಗೂ ಸಮಾಜಮುಖಿ ಕೆಲಸಗಳು ಇಂದಿಗೂ ಬದುಕಿವೆ ಎಂದು ಹೇಳಿದರು.

ಕನ್ನಡದ ಚಿತ್ರರಂಗದ ‘ನಂದಾದೀಪ’ ಲೀಲಮ್ಮರ ಅಪರೂಪದ ಫೋಟೋಗಳು ಇಲ್ಲಿವೆ…

ರಾಜ್ಯ ಪೊಲೀಸ್ ಇಲಾಖೆಯ 92,841 ಅಧಿಕಾರಿ, ಸಿಬ್ಬಂದಿಗೆ 20 ಲಕ್ಷ ರೂ. ಗುಂಪು ವಿಮೆ

ಅಮ್ಮನ ಅಗಲಿಕೆಯಿಂದ ಒಬ್ಬಂಟಿಯಾದ ವಿನೋದ್​ ರಾಜ್​… ಶನಿವಾರ ನೆಲಮಂಗಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + thirteen =
Remember me
