
ಬೆಂಗಳೂರು:ಸೇವಾದಳ ಕಾರ್ಯಕರ್ತ ಎಚ್.ಡಿ.ಕೋಟೆಯ ಮಣಿಕಂಠನಿಗೆ 25 ಸಾವಿರ ಸಹಾಯಧನ ಮತ್ತು ಕಾಲು ಕಳೆದುಕೊಂಡ ಕಾರ್ಯಕರ್ತನ ಮಗನಿಗೆ ಉದ್ಯೋಗ ನೀಡುವುದಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಮಣಿಕಂಠ ಅವರು ತಮ್ಮ ನೋವು ಹೇಳಿಕೊಂಡ ಸಂದರ್ಭದಲ್ಲಿ ಯಾವುದಾದರು ಇಲಾಖೆಯಲ್ಲಿ ಉದ್ಯೋಗಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದರು.ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ ಕಾರ್ಯಕ್ರಮದಲ್ಲಿ ಅಹವಾಲು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಮೃತ ಪಟ್ಟಿದ್ದು, ನನ್ನ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ. ನಾನು ಸಹ ಕೊರೋನ ಸಮಯದಲ್ಲಿ ಕಾಲು ಕಳೆದುಕೊಂಡಿದ್ದು, ತೊಂದರೆಯಲ್ಲಿ ಇದ್ದೇನೆ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಕಾರ್ಯಕರ್ತ ಕಿರಣ್ ಅವಲತ್ತುಕೊಂಡಾಗ, ಕೂಡಲೇ ಕೆಲಸ ಸಿಗುವಂತೆ ಮಾಡುತ್ತೇನೆ. ಸಚಿವರಾದ ವೆಂಕಟೇಶ್ ಅವರನ್ನು ಭೇಟಿಯಾಗಿ ಎಂದು ತಿಳಿಸಿದರು.ನನ್ನ ಜಮೀನನ್ನು ಸ್ಥಳೀಯ ಸಂಸ್ಥೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಈ ಅನ್ಯಾಯ ಸರಿಪಡಿಸಿ ಎಂದು ಬಂಟ್ವಾಳದ ಗಿಲ್ಬರ್ಟ ಅವರ ಮನವಿಗೆ ಸ್ಪಂದಿಸಿ, ಇನ್ನೊಂದು ವಾರದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ ಎಂದರು.ತಮ್ಮ ಬಡಾವಣೆಯಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ನಿವೃತ್ತ ಯೋಧ ರಾಮಮೂರ್ತಿ ನಗರದ ಆರ್ ಜಿ ಜಿ ನಾಯ್ಡು ಅವರ ಕೋರಿಕೆಗೆ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ನಿವಾರಣೆ ಮಾಡಲಾಗುವುದು. ಧೈರ್ಯದಿಂದಿರಿ, ಚಿಂತೆ ಮಾಡಬೇಡಿ ಎಂದರು.ಯಶವಂತಪುರದ ಅಬ್ರಹಾಂ ಶಂಕರ್ ಅವರು ಮಗಳ ಶಾಲಾ ಶುಲ್ಕ ಮತ್ತು ಮನೆ ನೀಡಿ ಎಂದು ಮನವಿ ಸಲ್ಲಿಸಿದಾಗ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ದೊರೆಕಿಸುವ ಭರವಸೆ ನೀಡಿದರು.ನಾನು 39 ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ. ಎಂಎಸ್‌ಐಎಲ್ ಗೆ ನಾಮನಿರ್ದೇಶನ ಮಾಡಿ ಎಂದು ತೇರದಾಳದ ಸಂಗಮೇಶ್ ಮನವಿಗೆ ಗೃಹಸಚಿವರಾದ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಅವರಿಗೆ ತಿಳಿಸುತ್ತೇನೆ ಎಂದರು.ಸಾರ್, ನಿಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ ನನಗೆ ಮನೆ ಕೊಡಿ ಎಂದು ಹಾರೋಹಳ್ಳಿಯ ಮಂಜುಳಾ ಅವರ ಮನವಿಗೆ ನಿನಗೆ ಇನ್ನೂ ಮನೆ ಸಿಕ್ಕಿಲ್ಲವೇ? ಈ ಬಾರಿ ಸಿಗುತ್ತದೆ ಎಂದು ಭರವಸೆ ನೀಡಿದರು.ಕುಡುಚಿಯ ಬಾಬಾ ಸಾಹೇಬ್ ಜಿನರಾಲ್ಕರ್, ಪಾವಗಡದ ರಾಮಮೂರ್ತಿ, ಬಬಲೇಶ್ವರದ ಫಯಾಜ್, ಬನಶಂಕರಿಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಪಕ್ಷದ ವಿವಿಧ ವಿಭಾಗಗಳಲ್ಲಿ ಪದಾಧಿಕಾರಿಗಳನ್ನಾಗಿ ನೇಮಕಾತಿ ಮಾಡಿಕೊಳ್ಳುವಂತೆ ಅಹವಾಲು ಸಲ್ಲಿಸಿದರು.ನಿಗಮ ಮಂಡಳಿಗೆ ನೇಮಕ ಹಾಗೂ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನ, ಮನೆ, ನಿವೇಶನ, ಜಮೀನು ಸಮಸ್ಯೆ, ಹಾಸ್ಟೆಲ್ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳನ್ನು ಹೊತ್ತು ರಾಜ್ಯದ ಎಲ್ಲೆಡೆಯಿಂದ ಬಂದಿದ್ದ ಕಾರ್ಯಕರ್ತರು ಡಿಸಿಎಂ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
