ಬೆಂಗಳೂರು:ಡಿಸಿಎಂ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ್​ ಕಾರಜೋಳ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು, ಹೈದರಾಬಾದ್​ನ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾ.ಗೋಪಾಲ್​ ಕಾರಜೋಳ ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಕಳೆದ 24 ದಿನದಿಂದಲೂ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ವೆಂಟಿಲೇಟ​ರ್​ನಲ್ಲಿದ್ದರು. ಶನಿವಾರದಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಭಾನುವಾರ ಹೈದರಾಬಾದ್​ಗೆ ಏರ್​ಲಿಫ್ಟ್​​ ಮೂಲಕ ಕರೆದೊಯ್ಯಲಾಗಿದೆ.
ಗೋವಿಂದ ಕಾರಜೋಳ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬದ 8 ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಡಿಸಿಎಂ ಕಾರಜೋಳ ಗುಣಮುಖರಾಗಿದ್ದಾರೆ. ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಅವರ ಪತ್ನಿ ಚಿಕಿತ್ಸೆ ಬಳಿಕ ಹಿಂದಿರುಗಿದ್ದಾರೆ. ಸೋಂಕು ಕಾಣಿಸಿಕೊಂಡಾಗಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಗೋಪಾಲ್​, 24 ದಿನದಿಂದ ವೆಂಟಿಲೇಟ​ರ್​ನಲ್ಲಿ ಇದ್ದರು.
ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ… ಎನ್ನುತ್ತಾ ಕಣ್ಣೀರು ಹಾಕಿದ ಗೋವಿಂದ ಕಾರಜೋಳ

ಅ.19 ರಿಂದ ಈ ಮೂರು ರಾಜ್ಯಗಳಲ್ಲಿ ಶಾಲಾ-ಕಾಲೇಜು ಆರಂಭ

ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
