ಬೆಂಗಳೂರೂ:ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸುತ್ತಿರುವ ಮುಷ್ಕರವನ್ನು ಸದ್ಯ ಕೈಬಿಡಿ. ನಿಮ್ಮ ಯೂನಿಯನ್​ ಲೀಡರ್​ಗಳ ಮೇಲೆ ನಂಬಿಕೆ ಇಟ್ಟು, ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶುಕ್ರವಾರ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡ ಕೂಡಲೇ ಯೂನಿಯನ್ ಲೀಡರ್​ಗಳನ್ನು ತಮ್ಮ ನಿವಾಸಕ್ಕೇ ಕರೆಯಿಸಿಕೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಹವಾಲುಗಳನ್ನು ಆಲಸಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಾರಿಗೆ ನೌಕರರು ಮುಷ್ಕರ ಬಿಟ್ಟು ಕೆಲಸ ಆರಂಭಿಸಬೇಕು. ಎಲ್ಲೆಲ್ಲಿ ಬಸ್ ಸಂಚಾರ ಇದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಯೂನಿಯನ್ ಲೀಡರ್​ಗಳ ಜತೆಗೆ ಇನ್ನೂ ಒಂದು ಸುತ್ತಿನ ಸಭೆ ನಡೆಸುತ್ತೇವೆ.
ಇದನ್ನೂ ಓದಿ:ಡಿಸಿಎಂ ಸವದಿಯವರ ತವರು ಜಿಲ್ಲೆ ಬೆಳಗಾವಿಯಲ್ಲೂ ಸಾರಿಗೆ ನೌಕರರ ಮುಷ್ಕರ
ಸಾರಿಗೆ ಇಲಾಖೆ ನೌಕರರು ಅವರ ನಾಯಕರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು. ಅವರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ನಿಮ್ಮ ಹಿತವನ್ನು ಕಾಯುತ್ತೇವೆ. ಕರೊನಾ ಇದ್ದಾಗಲೂ ಎಲ್ಲರಿಗೂ ವೇತನ ಕೊಟ್ಟಿದ್ದೇವೆ. ವೇತನ ತಡೆ ಹಿಡಿದಿಲ್ಲ. ಜನರಿಗೆ ತೊಂದರೆ ಕೊಡಬೇಡಿ. ಲೀಡರ್​ಗಳ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಹಿಂಪಡೆಯಬೇಕು. ಸದ್ಯಕ್ಕೆ ಎಸ್ಮಾ ಜಾರಿಗೊಳಿಸುವುದಿಲ್ಲ. ನೌಕರರ ಮೇಲೆ ನಂಬಿಕೆ, ಭರವಸೆ ಇದೆ. ಮುಷ್ಕರ ಕೈಬಿಟ್ಟು ಕೆಲಸ ಶುರುಮಾಡಿ ಎಂದು ಸಚಿವರು ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
‘ಸಾರ್ವಜನಿಕರು ಸಹಕರಿಸಿ’ – ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ !

ಸಾರಿಗೆ​ ನೌಕರರ ಮುಷ್ಕರ – ಎಲ್ಲೆಲ್ಲಿ ಏನೇನು ಸ್ಥಿತಿಗತಿ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
