ಬಾಗಲಕೋಟೆ:ನನಗೆ ಉದ್ಯೋಗದ ಬಗ್ಗೆ ನಾಲೇಡ್ಜ್​ ಇಲ್ಲ. “ತೊಗಲಾಗಿನ ಬಲ್ಲ ತಿಮ್ಮಣ್ಣ” ಇದ್ದಂಗೆ ನಾನು. ವ್ಯಾಪಾರ, ಉದ್ಯೋಗ, ವಹಿವಾಟಿನ ಬಗ್ಗೆ ಐಡಿಯಾ ಇಲ್ಲ… ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮುರುಗೇಶ್ ನಿರಾಣಿ ಅವರು ಗುತ್ತಿಗೆ ಪಡೆದ ವಿಚಾರವಾಗಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ, ದಯವಿಟ್ಟು ಆ ವ್ಯಾಪಾರಕ್ಕೂ ನನಗೂ ಸಂಬಂಧ ಇಲ್ಲದ ವಿಷಯ. “ತೊಗಲಾಗಿನ ಬಲ್ಲ ತಿಮ್ಮಣ್ಣ” ಅಂತಾರಲ್ಲ ಹಳ್ಳಿಯಲ್ಲಿ ಹಾಗೆ ನಾನು. ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಇದನ್ನೂ ಓದಿರಿರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ… ಮಗು ಬದುಕಲಿಲ್ಲ!
ನಿರಾಣಿ ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನು ಗೊತ್ತು? ಎಂದ ಕಾರಜೋಳ, ಆಡಳಿತ ವ್ಯವಸ್ಥೆಯಲ್ಲಿ ಯಾರು ಹೆಚ್ಚು ಬಿಡ್ ಮಾಡ್ತಾರೋ ಅವರಿಗೆ ಕೊಡ್ತಾರೆ. ಇವತ್ತು ದೇಶದಲ್ಲಿ ಉದ್ಯಮ ಅನ್ನೋದು ತೊಂದರೆಯಲ್ಲಿದೆ. ಹಾಗೆಯೇ ಸಕ್ಕರೆ ಉದ್ಯಮವೂ ತೊಂದರೆಯಲ್ಲಿದೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿರಿಮುಂದುವರೆದಿದೆ ಆನ್​ಲೈನ್​ ತರಗತಿ ಅನಾಹುತ: ಸ್ಮಾರ್ಟ್​ಫೋನ್​ ಇಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ!
ಈ ಪದದ ಅರ್ಥ: ಗ್ರಾಮೀಣ ಭಾಗದಲ್ಲಿ ನಾಣ್ನುಡಿಯಂತೆ ಬಳಕೆಯಲ್ಲಿರುವ ಪದ ‘ತೊಗಲಾಗಿನ ಬಲ್ಲ ತಿಮ್ಮಣ್ಣ’. ತೊಗಲಿನ ಹದ (ಚರ್ಮಗಾರಿಕೆ) ಚರ್ಮೋದ್ಯಮದಲ್ಲಿ ಇರುವವರಿಗೆ ಮಾತ್ರ ಗೊತ್ತಿರುತ್ತದೆಯೇ ವಿನಃ ಅನಾಮಿಕ ತಿಮ್ಮಣ್ಣನಿಗೆ ಗೊತ್ತಿರೋದಿಲ್ಲ ಅಂತ ಇದರ ಅರ್ಥ. ಏನೂ ಅರಿಯದವ, ಆ ಬಗ್ಗೆ ತಿಳಿಕೆ ಇಲ್ಲದವ, ಮುಗ್ಧ… ಎಂಬ ಸಂದರ್ಭಕ್ಕೆ ತಕ್ಕಂತೆ ಈ ನಾಣ್ನುಡಿಯನ್ನು ಬಳಸುತ್ತಾರೆ.
ಅಂದಹಾಗೇ ಡಿಸಿಎಂ ಗೋವಿಂದ​ ಕಾರಜೋಳ ಅವರ ಮಾತಿನಲ್ಲೇ ‘.. ನನಗೆ ಯಾವ ಉದ್ಯೋಗದ ಬಗ್ಗೆಯೂ ನಾಲೆಡ್ಜ್​ ಇಲ್ಲ..!’ ಎಂಬುದನ್ನು ಕೇಳಲು ಈ ವಿಡಿಯೋ ಲಿಂಕ್​ನ್ನು ಕ್ಲಿಕ್​ ಮಾಡಿ.
ವಿಡಿಯೋ ನೋಡಿ
https://www.facebook.com/VVani4U/videos/556705864991197/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
