ಬೆಂಗಳೂರು:ಟ್ರಕ್​ನಲ್ಲಿ ಹಸುವಿನ ಮಾಂಸ ತ್ಯಾಜ್ಯವನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದು, ಪೊಲೀಸರು ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದಾರೆ.
ಟ್ರಕ್​​ನಲ್ಲಿದ್ದ ಮಾಂಸದ ತ್ಯಾಜ್ಯವನ್ನು ಪರಿಶೀಲನೆ ನಡೆಸಲಾಗಿದೆ. ಟ್ರಕ್​​ನಲ್ಲಿದ್ದದ್ದು ಹಸುವಿನ ಮಾಂಸದ ತ್ಯಾಜ್ಯವಲ್ಲ. ಮೂಳೆಗಳು, ಕೊಂಬು ಹಾಗೂ ಚರ್ಮ ಹಸುವಿನದ್ದಲ್ಲ. ಆ ತ್ಯಾಜ್ಯವೂ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಡಿಸಿಪಿ ಬಾಬಾ ಅವರು ಸ್ಪಷ್ಟನೆ ನೀಡಿದ್ದಾರೆ.
Enquiry into the incident@bommanalliPS it's been confirmed that the commodities found in the vehicle included bones,horns,hides &animal byproducts were not from the cows& it was certified by BBMP Animal husbandry East slaughter house to the authorized trader.
— DCP Southeast BCP (@DCPSEBCP)September 7, 2023

ಕಳೆದ ರಾತ್ರಿ ಟ್ರಕ್​ವೊಂದರಲ್ಲಿ ಗೋವಿನ ದೇಹದ ಭಾಗಗಳು ಕಂಡುಬಂದಿವೆ ಎಂದು ಹೇಳಿರುವ ನಟಿ, ಸದ್ಯ ಆ ಟ್ರಕ್​ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಬಳಿ ಇದೆ ಎಂದೂ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಗೋಮಾಂಸದ ತ್ಯಾಜ್ಯ ಇರುವ ಈ ಟ್ರಕ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್​ಐಆರ್​ ದಾಖಲು ಮಾಡಲು ಪೊಲೀಸರು ಹಿಂಜರಿಯುತ್ತಿದ್ದಾರೆ ಎಂದಿರುವ ಐಂದ್ರಿತಾ, ಬೆಂಗಳೂರು ಪೊಲೀಸರು, ಪೊಲೀಸ್ ಕಮಿಷನರ್ ಅವರಿಗೂ ಮೆನ್ಷನ್ ಮಾಡಿದ್ದರು. ಮಾತ್ರವಲ್ಲ, ಗೋಹತ್ಯೆ ಅಪರಾಧ ಎಂದಿರುವ ಐಂದ್ರಿತಾ, ಈ ಕುರಿತಂತೆ ಪ್ರಧಾನಿ ಮೋದಿಯವರ ಎಕ್ಸ್ ಹ್ಯಾಂಡಲ್​ಗೂ ಮೆನ್ಷನ್ ಮಾಡಿ, ಗಮನ ಸೆಳೆಯಲು ಯತ್ನಿಸಿದರು.
https://twitter.com/AindritaR/status/1699405309960143042?s=20
ಇದೀಗ ಐಂದ್ರಿತಾ ರೇ ಆರೋಪಕ್ಕೆ ಸ್ವತಃ ಡಿಸಿಪಿ ಅವರೇ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಟ್ರಕ್​ನಲ್ಲಿ ಗೋವಿನ ದೇಹದ ಭಾಗಗಳು?; ಪ್ರಧಾನಿ ಮೋದಿಯ ಗಮನ ಸೆಳೆಯಲು ಯತ್ನಿಸಿದ ನಟಿ ಐಂದ್ರಿತಾ ರೇ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
