ಬೆಂಗಳೂರು:ಕರೊನಾ ಸೋಂಕು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದ ಸಂಜಯನಗರ ಮತ್ತು ಜೆ‌.ಸಿ. ನಗರ ಠಾಣೆಯ ಸಿಬ್ಬಂದಿ ಜತೆ ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ನೇರವಾಗಿ ಮಾತನಾಡಿ ಆತ್ಮಸ್ಥೈರ್ಯ ತುಂಬಿರುವ ವಿಡಿಯೋ ವೈರಲ್ ಆಗಿದೆ.
ಕರೊನಾ ಟೆಸ್ಟ್ ಮಾಡಿಸಿದ್ದರಿಂದ ನಿಮಗೆಲ್ಲ ಪಾಸಿಟಿವ್ ಇರುವುದು ಗೊತ್ತಾಗಿದೆ. ಇಲ್ಲವಾದರೆ ಸೋಂಕು ತಗುಲಿರುವುದೇ ಗೊತ್ತಾಗುತ್ತಿರಲಿಲ್ಲ. ಆತಂಕಪಡದೆ ಧೈರ್ಯವಾಗಿದ್ದುಕೊಂಡು ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ.ಇದನ್ನೂ ಓದಿರಿಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!
ಮೂರು ತಿಂಗಳಿಂದ ನಿರಂತರವಾಗಿ ಸಾರ್ವಜನಿಕರ ಜತೆ ನೇರ ಸಂಪರ್ಕದಲ್ಲಿದ್ದು ಕೆಲಸ ಮಾಡಿದ್ದೇವೆ. ವಲಸಿಗರನ್ನು ಊರಿಗೆ ಕಳುಹಿಸುವುದು, ಬಂದೋಬಸ್ತ್ ಡ್ಯೂಟಿ ಸೇರಿ ಮುಂತಾದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ. ಮುಂಜಾಗ್ರತೆ ವಹಿಸಿದ್ದರೂ ಸೋಂಕು ತಗುಲುತ್ತಿದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಬಹುತೇಕರಿಗೆ ಸೋಂಕು ಬಂದು ಹೋಗಿದೆ. ಯುವ ವಯಸ್ಸಿನವರು ಆಗಿರುವುದರಿಂದ ಏನು ಆಗುವುದಿಲ್ಲ. ಶೀಘ್ರವಾಗಿ ಗುಣಮುಖರಾಗುತ್ತೀರಿ. ನಿಮ್ಮ ಹಾಗೂ ಕುಟುಂಬದ ಜತೆ ಇಲಾಖೆ ಇದೆ. ನಿಮಗೆ ಏನೇ ಸಮಸ್ಯೆಯಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಹೇಳುತ್ತಾ ಚಪ್ಪಾಳೆ ತಟ್ಟಿ ಆಸ್ಪತ್ರೆಗೆ ಕಳುಹಿಸಿರುವುದು ವಿಡಿಯೋದಲ್ಲಿದೆ.
https://www.facebook.com/VVani4U/videos/314782402907947/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
