ಬೆಂಗಳೂರು:ಆರೋಪಿಗಳನ್ನು ಬಂಧಿಸಲು ಕೆರಳಕ್ಕೆ ತೆರಳಿದ್ದ ವೈಟ್​ಫೀಲ್ಡ್​ ಸೈಬರ್​ ಕ್ರೈಂ ಠಾಣೆಯ ಇನ್ಸ್​ಪೆಕ್ಟರ್​ ಶಿವಕುಮಾರ್​ ಹಾಗೂ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿಲ್ಲ. ಪ್ರಕರಣ ಸಂಬಂಧ ನೋಟಿಸ್​ ನೀಡಿ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ ಎಂದು ವೈಟ್​ಫೀಲ್ಡ್​ ವಿಭಾಗದ ಡಿಸಿಪಿ ಎಸ್​. ಗಿರೀಶ್​ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಪಿ ಗಿರೀಶ್​ ಸೈಬರ್​ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಲು ಕೇರಳದ ಕೊಚ್ಚಿಗೆ ತೆರಳಿದಾಗ ಶಿವಕುಮಾರ್​ ಹಾಗೂ ಸಿಬ್ಬಂದಿಯನ್ನು ಸ್ಥಳೀಯ ಆರಕ್ಷಕರು ವಶಕ್ಕೆ ಪಡೆದಿದ್ದರು.
ಎಸಿಪಿ ನೇತೃತ್ವದ ತಂಡ ಈಗಾಗಲೇ ಕೇರಳದ ಕೊಚ್ಚಿಗೆ ತೆರಳಿದ್ದು, ಅಲ್ಲಿನ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಸಂಬಂಧ ವೈಟ್​ಫೀಲ್ಡ್​ ಸೈಬರ್​ ಕ್ರೈಂ ಠಾಣೆಯ ಇನ್ಸ್​ಪೆಕ್ಟರ್​ ಶಿವಕುಮಾರ್​ ಹಾಗೂ ಸಿಬ್ಬಂದಿಯನ್ನು ಪುನಃ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ನಟಿಯ ಬಾಳಲ್ಲಿ ವಿಧಿಯ ಕ್ರೂರ ಆಟ
ಬೆಂಗಳೂರು ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಲೆಂದು ಕೇರಳಕ್ಕೆ ತೆರಳಿದ್ದರು. ಈ ಸಂದರ್ಭ ಕೇರಳದ ಕಲ್ಮಶೇರಿ ಪೊಲೀಸರು ನಾಲ್ವರು ಪೊಲೀಸ್​ ಅಧಿಕಾರಿಗಳನ್ನು ಅರೆಸ್ಟ್ ಮಾಡಿದ್ದರು.
ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರು, ಆರೋಪಿಗಳಿಂದ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊರಿಸಲಾಗಿದ್ದು, ಆರೋಪಿಗಳು ಕಲ್ಮಶೇರಿ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿಂದೆ ಉದ್ಯೋಗ ಕೊಡಿಸುವುದಾಗಿ ಸಾಫ್ಟ್​ವೇರ್ ಇಂಜಿನಿಯರ್​ಗೆ ಮೋಸವಾಗಿದ್ದ ಹಿನ್ನಲೆಯಲ್ಲಿ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ, ಹಣದ ರಿಕವರಿಗೆಂದು ಕೇರಳಕ್ಕೆ ತೆರಳಿದ್ದರು. ಚಂದಕ್ ಶ್ರೀಕಾಂತ್ ಎಂಬುವವರು ಕೊಟ್ಟಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೇರಳಕ್ಕೆ ತೆರಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
