ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕು ಹುಸ್ಕೂರು ಗ್ರಾಮದ ರೈಲು ಹಳಿ ಬಳಿ ಯುವ ಪ್ರೇಮಿಗಳ ಮೃತದೇಹಗಳು ದೊರೆತಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದು ದೃಢಪಟ್ಟಿಲ್ಲ.
ಮೃತಪಟ್ಟ ಯುವಕನನ್ನು ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಯುವತಿಯ ಗುರುತು ಬಹಿರಂಗವಾಗಿಲ್ಲ. ಇವರ ಮೃತದೇಹಗಳು ದೊರೆತ ಸ್ಥಳ ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವೆ ಇದೆ.
ಸ್ಥಳೀಯರು ಹೇಳುವ ಪ್ರಕಾರ, ಇವರಿಬ್ಬರೂ ಕೆಲವು ತಿಂಗಳುಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ಒಂದು ವಾರದ ಹಿಂದೆ ಮನೆ ಬಿಟ್ಟು ಬಂದು ಮದುವೆಯಾಗಿದ್ದರು. ನಿನ್ನೆ ಮದುವೆಯಾಗಿದ್ದ ಫೋಟೋವನ್ನು ತಮ್ಮ ವಾಟ್ಸಾೃಪ್ ಖಾತೆಗಳಲ್ಲಿ ಸ್ಟೇಟಸ್ ಕೂಡ ಹಾಕಿಕೊಂಡಿದ್ದರು. ನಂತರ ಇದ್ದಕ್ಕಿದ್ದಂತೆಯೇ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ನಂತರ ರೈಲು ಹಳಿ ಬಳಿ ಇವರ ಮೃತದೇಹಗಳು ಪತ್ತೆಯಾಗಿವೆ.
ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರೈಲು ಹೋದ ರಭಸಕ್ಕೆ ಪ್ರೇಮಿಗಳ ಮೃತದೇಹಗಳು ದೂರ ದೂರ ಬಿದ್ದಿದ್ದವು. ಸದ್ಯ ಪ್ರೇಮಿಗಳು ನಿಜಕ್ಕೂ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಅಥವಾ ಇವರ ಸಾವಿನಲ್ಲಿ ಬೇರೆ ಯಾರದಾದರೂ ಕೈವಾಡ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್​ಬೇಲಿ ಹಾಕಿದ್ದು ಕಾಡು ಹಂದಿಗಾಗಿ; ಪ್ರಾಣ ಬಿಟ್ಟಿದ್ದು ಮಾತ್ರ ಆನೆಮರಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
