ಬೆಂಗಳೂರು:ನಗರದ ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸ್​ ಠಾಣೆಯ ಮುಂಭಾಗದಲ್ಲಿ ಶವವೊಂದು ಪತ್ತೆಯಾಗಿದೆ. ಮೋರಿ ಅಡಿಯಲ್ಲಿ ಶವ ಪತ್ತೆಯಾಗಿದ್ದು, ಎರಡು ವರ್ಷಗಳ ಹಿಂದೆಯೇ ದೇಹವನ್ನು ಬಚ್ಚಿಟ್ಟಿರುವ ಅನುಮಾನ ವ್ಯಕ್ತವಾಗಿದೆ.
ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಹೆಚ್ ಬಿ ಆರ್ ಕಲ್ಯಾಣ ಮಂಟಪದ ಮುಂದಿರುವ ಮೋರಿಯಲ್ಲಿ ಶವ ಪತ್ತೆಯಾಗಿದೆ. ಕಲ್ಲು ಮುಚ್ಚಿದ್ದ ಮೋರಿಯ ಕಲ್ಲನ್ನು ಸೋಮವಾರದಂದು ಸ್ವಚ್ಛ ಮಾಡುವ ಕಾರಣಕ್ಕಾಗಿ ತೆಗೆಯಲಾಗಿದೆ. ಆಗ ಅಲ್ಲಿ ಶವ ಕಾಣಿಸಿಕೊಂಡಿದೆ. ದೃಶ್ಯ ಸಿನಿಮಾದಲ್ಲಿ ಶವವನ್ನು ಪೊಲೀಸ್​ ಠಾಣೆಯ ಅಡಿಯಲ್ಲೇ ಹೂತಿಡುವಂತೆ ಈ ಘಟನೆಯಲ್ಲೂ ಪೊಲೀಸ್​ ಠಾಣೆಯ ಬಳಿಯೇ ಹೂತಿಟ್ಟಿರುವುದು ಅನೇಕ ಅನುಮಾನಗಳನ್ನು ಹುಟ್ಟಿಸಿದೆ.
ಇದೀಗ ಈ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು ಮೋರಿ ನಿರ್ಮಾಣ ಮಾಡಿದವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಶವವನ್ನು ತೆರವುಗೊಳಿಸಲಾಗಿರುವ ವಿಜಯನಗರ ಪೊಲೀಸರು ಅನಾಥ ಶವದ ಬಗ್ಗೆ ಮಾಹಿತಿ ಹುಡುಕಾಟ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತಲೆ ಎತ್ತಲಿದೆ ಬಿಜೆಪಿ! ಅಮಿತ್​ ಷಾ ಯೋಜನೆಯೇ ಬೇರೆಯಿದೆಯಂತೆ!

ಉಪೇಂದ್ರರ ಮಿಮಿಕ್ರಿ, ನಟನೆ ಮೂಲಕ ಮನೆ ಮಾತಾಗಿದ್ದ ಜೂನಿಯರ್​ ಉಪೇಂದ್ರ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
