ಧಾರವಾಡ:ಇಲ್ಲಿನ ಹೋಟೆಲ್​ವೊಂದರ ಮುಂಭಾಗ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕೆಸಿಸಿ ಬ್ಯಾಂಕ್ ಪಕ್ಕದ ಹೋಟೆಲ್ ಮುಂಭಾಗ ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬನ ಶವ ಮಖಾಡೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂಗಿನಲ್ಲಿ ರಕ್ತಸ್ರಾವ ಆಗಿದೆ. ಕರೊನಾ ಭೀತಿ ಆವರಿಸುವ ನಡುವೆ ಈ ಶವ ಕಂಡ ಜನತೆ ಮತ್ತಷ್ಟು ಆತಂಕಗೊಂಡಿದ್ದಾರೆ.ಇದನ್ನೂ ಓದಿರಿ‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕತೆ ನೀವೊಮ್ಮೆ ನೋಡಲೇ ಬೇಕು…
ಬೆಳಗ್ಗೆ ಹೋಟೆಲ್ ಮಾಲೀಕ ಅಂಗಡಿ ಬಾಗಿಲು ತೆರೆಯಲೆಂದು ಆಗಮಿಸಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸತ್ತು ಬಿದ್ದಿರುವುದು ಗೊತ್ತಾಗಿದೆ. ಅಕ್ಕಪಕ್ಕದ ಅಂಗಡಿಯವರು ಕೂಡಲೇ ಜಿಲ್ಲಾಡಳಿತದ ಕಂಟ್ರೋಲ್ ರೂಂ, ಆಂಬುಲೆನ್ಸ್​ ಸಿಬ್ಬಂದಿಗೂ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಸಿಬ್ಬಂದಿ ಶವ ಸಾಗಿಸಲು ಪಿಪಿಇ ಕಿಟ್ ಇಲ್ಲದ ಹಿನ್ನೆಲೆಯಲ್ಲಿ ನಿರಾಕರಿಸಿದರು.
ಸ್ಥಳ ಪರಿಶೀಲಿಸಿದ ನಗರ ಠಾಣೆ ಪೊಲೀಸರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಧ್ಯಾಹ್ನ 12 ಗಂಟೆಯಾದರೂ ಯಾರೊಬ್ಬರು ಶವವನ್ನು ಮೇಲಕ್ಕೆ ಎತ್ತಿರಲಿಲ್ಲ. ಮೃತಪಟ್ಟ ವ್ಯಕ್ತಿಯ ಮೂಗಿನಿಂದ ರಕ್ತಸ್ರಾವ ಆಗಿದ್ದರಿಂದ ಶವ ಸಾಗಿಸಲು‌ ಹಿಂದೇಟು ಹಾಕುತ್ಗಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಮೃತನ ಪತ್ನಿ ಮತ್ತು ಮಗ ಶವವನ್ನು ಆಸ್ಪತ್ರೆಗೆ ಸಾಗಿಸಿದರು. ಮೃತ ವ್ಯಕ್ತಿಯ ಹೆಸರು ರಫಿಕ್. ಕುಡಿತ ಚಟ ಅಂಟಿಸಿಕೊಂಡಿದ್ದ ಈತ ಪಾನಮತ್ತನಾಗಿ ಬಿದ್ದು ಸತ್ತಿರಬಹುದು ಎನ್ನಲಾಗಿದೆ. ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿ ಬರಬೇಕಿದೆ.
ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
