ಬೆಳಗಾವಿ:ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಸಾವಿಗೀಡಾದ್ದರಿಂದ ಆರೋಗ್ಯಾಧಿಕಾರಿಗಳು ಶವ ಸಾಗಿಸಲು ಅಂಬುಲೆನ್ಸ್ ಸಹ ನೀಡದೇ ಅಮಾನವೀಯತೆ ಮೆರೆದಿದ್ದಾರೆ. ದಿಕ್ಕು ತೋಚದೇ ಸಂಬಂಧಿಕರು ಸೈಕಲ್ ಮೇಲೆಯೇ ಶವ ಸಾಗಿಸಿದ ಮನಕಲಕುವ ಘಟನೆಗೆ ಬೆಳಗಾವಿ ಭಾನುವಾರ ಸಾಕ್ಷಿಯಾಗಿದೆ.
ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಸದೆಪ್ಪ ಪರಸಪ್ಪ ಸಲಗಾರ(71) ಎಂಬುವರಿಗೆ ಕರೊನಾ ಸೋಂಕಿನ ಲಕ್ಷಣಗಳ ಕಂಡುಬಂದ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಲು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಭಾನುವಾರ ಬೆಳಗ್ಗೆ 6ಕ್ಕೆ ಮನೆಯಲ್ಲಿಯೇ ವೃದ್ಧ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ;ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ
ಪತಿಯನ್ನು ಕಳೆದುಕೊಂಡ ವೃದ್ಧೆ ಗಂಗಮ್ಮ ಶವ ಸಾಗಿಸಲು ಅಂಬುಲೆನ್ಸ್​ಗಾಗಿ ವೈದ್ಯಾಧಿಕಾರಿಗಳನ್ನು ಬೆಳಗ್ಗೆಯಿಂದಲೇ ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆಗೂ ಮುನ್ನವೇ ಶಂಕಿತ ಸಾವನ್ನಪ್ಪಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಯಂತೆ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ.
ವಿಪರ್ಯಾಸವೆಂದರೆ, ಸೋಂಕಿನ ಭೀತಿಯಿಂದ ಸ್ಥಳೀಯರು ಸಹ ಸಹಾಯಕ್ಕೆ ಮುಂದಾಗಲಿಲ್ಲ. ದಿಕ್ಕು ತೋಚದಂತಾದ ಸಂಬಂಧಿಕರು ಮಧ್ಯಾಹ್ನ ಶವವನ್ನು ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿ ಸೈಕಲ್ ಮೇಲೆ ಸಾಗಿಸಿ, ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
https://www.facebook.com/VVani4U/videos/2923137861131824/
ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
