ಬೆಂಗಳೂರು: ಕರೊನಾ ಸೋಂಕಿಗೆ ತುತ್ತಾಗಿ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುವಾಗ ನನ್ನ ಪತ್ನಿ ‘ನೀನಿರದಿದ್ದರೆ ನಾನೂ ಈ ಜಗತ್ತಿನಲ್ಲಿರುವುದಿಲ್ಲ’ ಎಂದು ಮೆಸೇಜ್​ನಲ್ಲಿ ಕಳುಹಿಸಿದ್ದಳು. ಆ ಒಂದು ಮೆಸೇಜ್ ನನ್ನಲ್ಲಿ ಬದುಕುವ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿತು…! ಈಗ ಕರೊನಾದಿಂದ ಸಂಪೂರ್ಣವಾಗಿ ಗುಣಮುಖನಾಗಿ ಬಿಡುಗಡೆಯಾಗಿ ಬಂದಿದ್ದೇನೆ.
ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿ ಆತಂಕ ಮೂಡಿಸಿದೆ. ಮತ್ತೊಂದೆಡೆ ಕರೊನಾ ಸೋಂಕಿಗೆ ತುತ್ತಾದರೂ ಆತ್ಮಸ್ಥೈರ್ಯದಿಂದ ಸಾವನ್ನೇ ಗೆದ್ದುಬಂದಿರುವ ರಾಜರಾಜೇಶ್ವರಿನಗರ ನಿವಾಸಿ ವೆಂಕಟ್ ರಾಘವ್ ಹಂಚಿಕೊಂಡಿರುವ ಅನುಭವದ ಮಾತುಗಳು ಹಲವರಿಗೆ ಧೈರ್ಯ ತುಂಬಿದೆ. ವೈರಸ್ ತಗುಲಿದ್ದು ಎಲ್ಲಿ, ಹೇಗೆ? ವೈದ್ಯರು ಏನೆಲ್ಲ ಚಿಕಿತ್ಸೆ ಕೊಟ್ಟರು? ಎಂಬುದರ ವಿವರ ಇಲ್ಲಿದೆ.
ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಿಲ್ಲ:ಕರೊನಾ ಬಗ್ಗೆ ಅರಿವಿದ್ದರಿಂದ ಮನೆಗೆ ಬಂದ ನಂತರವೂ ನಾನು ಮನೆಯವರಿಂದ ದೂರವಾಗಿಯೇ ಅಂತರ ಕಾಯ್ದುಕೊಂಡೆ. ನಾನು ಮುಟ್ಟಿದ ವಸ್ತುಗಳನ್ನು ನನ್ನ ಕುಟುಂಬದವರು ಮುಟ್ಟದಂತೆ ನೋಡಿಕೊಂಡೆ. ನಾನು ಬಂದ ದಿನವೇ ಖಾಸಗಿ ಆಸ್ಪತ್ರೆಗೆ ತೆರಳಿದೆ. ಅವರಿಗೆ ನನ್ನ ದೇಹ ಸ್ಥಿತಿ ವಿವರಿಸಿದೆ. ಆದರೆ, ಅವರು ನನ್ನನ್ನು ಪರೀಕ್ಷೆ ಕೂಡ ಮಾಡಲಿಲ್ಲ. ಕೊನೆಗೆ ಸಂಬಂಧಿಯೊಬ್ಬರು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ದೂರವಾಣಿ ಸಂಖ್ಯೆ ಕೊಟ್ಟು ಮಾಹಿತಿ ನೀಡಿದರು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರು ನನ್ನ ದೇಹಸ್ಥಿತಿ ನೋಡಿದ ಕೂಡಲೇ ನನ್ನ ಟ್ರಾವೆಲ್ ಹಿಸ್ಟರಿ ಪಡೆದರು, ರಕ್ತ, ಕಫವನ್ನು ಪರೀಕ್ಷೆಗೆ ಕಳುಹಿಸಿದರು. ನಂತರ ನನ್ನನ್ನು ಮನೆಗೆ ಕಳುಹಿಸಿದರು. ಆಗಲೂ ನಮ್ಮ ಮನೆಯವರಿಂದ ನಾನು ದೂರ ಉಳಿದೆ. ಒಂದೆರಡು ದಿನಗಳಲ್ಲೇ ಆಸ್ಪತ್ರೆ ವೈದ್ಯರು ಕರೆ ಮಾಡಿ ಕರೊನಾ ಸೋಂಕು ದೃಢಪಟ್ಟಿರುವ ಮಾಹಿತಿ ನೀಡಿದರು. ಅಲ್ಲದೆ, ಕೂಡಲೇ ಬಂದು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ನಾನು ಒಂಟಿಯಾಗಿ ಬರುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ ನಂತರ ಮನೆಗೆ ಆಂಬ್ಯುಲೆನ್ಸ್ ಕಳುಹಿಸಿದರು. ನಿಜಕ್ಕೂ ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ನನಗೆ ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅವರಿಗೆ ಸೋಂಕು ತಗಲುವ ಸಾಧ್ಯತೆಯಿತ್ತು. ಸುರಕ್ಷತಾ ಕ್ರಮ ಕೈಗೊಂಡು ಚಿಕಿತ್ಸೆ ನೀಡಿದರು.
ಚಿಕಿತ್ಸೆ ಹೇಗಿತ್ತು?
ಕರೊನಾ ಸೋಂಕು ತಗುಲಿದರೆ, ಜ್ವರ ನಿರಂತರವಾಗಿರುತ್ತದೆ. ಬೆಳಗಿನ 3 ಗಂಟೆಯಿಂದ 6 ಗಂಟೆಯವರೆಗೆ 106 ಡಿಗ್ರಿಗೆ ತಲುಪುತ್ತದೆ. ನಂತರ ದಿನವಿಡೀ ಕನಿಷ್ಠ 100 ಡಿಗ್ರಿ ಜ್ವರ ಇರುತ್ತದೆ. ಅದಕ್ಕಾಗಿ ವೈದ್ಯರು ನನಗೆ ಪ್ಯಾರಸಿಟಮಲ್, ಸ್ಟಾರ್ ಫ್ಲೂ, ಸೈಡ್ ಇನ್ಪೆಕ್ಷನ್ ಬರದಂತೆ ಆಂಟಿ ಬಯೋಟಿಕ್ ನೀಡಿ ಚಿಕಿತ್ಸೆ ಮುಂದುವರಿಸಿದರು. ದೇಹದ ಗುಣಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಿದರು. ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಗಳನ್ನು ನೀಡುತ್ತಿದ್ದರು. ನಿರಂತರವಾಗಿ ನನ್ನನ್ನು ಪರೀಕ್ಷೆಗೊಳಪಡಿಸುತ್ತಿದ್ದರು. ಕೊನೆಗೆ ನನ್ನ ರಕ್ತ, ಕಫ ಸೇರಿ ಸಂಬಂಧಿಸಿದ ಎಲ್ಲ ಮಾದರಿಯನ್ನು ಪಡೆದು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತು. ಮಾ. 6ಕ್ಕೆ ಶುರುವಾದ ಜ್ವರ ಮಾ.21ಕ್ಕೆ ಇಲ್ಲದಂತಾಯಿತು. ಅಂತಿಮವಾಗಿ ನನ್ನನ್ನು ಕರೊನಾ ಸೋಂಕಿನಿಂದ ಗುಣವಾಗಿದ್ದೀರಿ ಎಂದು ಮನೆಗೆ ಕಳುಹಿಸಿದರು.
ನನಗೆ ಸೋಂಕು ತಗುಲಿದ್ದು ಹೇಗೆ?
ಕಾರ್ಯನಿಮಿತ್ತ ಮಾ. 3ರಂದು ಅಮೆರಿಕದ ಲಾಸ್​ಏಂಜಲೀಸ್​ಗೆ ಹೋಗಿದ್ದೆ. ಮಾರ್ಗ ಮಧ್ಯದಲ್ಲಿ ಲಂಡನ್​ನ ಹಿಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಯಿತು. ನಮ್ಮ ವಿಮಾನದಲ್ಲಿ ಇಟಲಿ ಮತ್ತು ಚೀನಾ ಪ್ರಜೆಗಳು ಪ್ರಯಾಣಿಸಿದರು. ಅವರಲ್ಲಿ ಯಾರಿಗಾದರೊಬ್ಬರಿಗೆ ಕರೊನಾ ಸೋಂಕು ತಗುಲಿರಬೇಕು ಎಂಬ ಊಹೆ ನನ್ನದು. ನಾನು ಕರೊನಾ ಕುರಿತಂತೆ ಎಚ್ಚರಿಕೆಯಿಂದಲೇ ಇದ್ದೆ. ಆದರೂ ಪ್ರಯಾಣಿಕರ ಫಿಂಗರ್ ಸ್ಕಾ್ಯನ್, ಶೌಚಗೃಹ ಅಥವಾ ಬೇರೆ ಮೂಲಗಳಿಂದ ನನಗೆ ಸೋಂಕು ತಗುಲಿರಬೇಕು. ಮಾ.6 ಗುರುವಾರ ಜ್ವರ ಕಾಣಿಸಿಕೊಂಡಿತು. ಗುರುವಾರ ಹೊರಡಬೇಕಿದ್ದ ನಾನು, ಒಂದು ದಿನ ಮುಂಚಿತವಾಗಿಯೇ ಹೊರಟು ಭಾನುವಾರ ಬೆಂಗಳೂರಿಗೆ ಬಂದೆ. ಆ ಸಂದರ್ಭದಲ್ಲಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕರೊನಾ ಕುರಿತಂತೆ ಯಾವುದೇ ಮುನ್ನೆಚ್ಚರಿಕೆ ಅಥವಾ ತಪಾಸಣಾ ವ್ಯವಸ್ಥೆ ಇರಲಿಲ್ಲ. ಕರೊನಾ ಸೋಂಕಿನ ಸಾಧ್ಯತೆ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಆದರೆ, ಆ ಸಂದರ್ಭದಲ್ಲಿ ಗಂಭೀರ ಪರೀಕ್ಷಾ ವ್ಯವಸ್ಥೆ ಕೊರತೆ ಹಿನ್ನೆಲೆಯಲ್ಲಿ ನನ್ನನ್ನು ಮನೆಗೆ ಕಳುಹಿಸಿದರು.
ಸರ್ಕಾರಿ ಆಸ್ಪತ್ರೆಾನು ಈವರೆಗೆ ಕಟ್ಟಿದ ತೆರಿಗೆ ಯಾವುದಕ್ಕೆ ಬಳಕೆಯಾಗಿದೆ ಎಂಬುದು ಈಗ ತಿಳಿಯಿತು. ಯಾರು ಏನೇ ಹೇಳಿದರೂ ಕೊನೆಗೆ ಸರ್ಕಾರವೇ ನಮ್ಮ ಕಷ್ಟಕ್ಕಾಗುವುದು. ಖಾಸಗಿ ಆಸ್ಪತ್ರೆಯಲ್ಲಿನ ವಾತಾವರಣವೇ ಬೇರೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ಮಗಳಿಗೆ ಪರೀಕ್ಷೆ ಬರೆಯಲು ಕೊಡುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿತ್ತು. ಆರೋಗ್ಯ ಸಚಿವರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ಅದಕ್ಕಾಗಿ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ.
ವಿಶ್ವದಾದ್ಯಂತ 8 ಲಕ್ಷ ಜನರಿಗೆ ಕರೊನಾ ಸೋಂಕು, ಸತ್ತವರ ಸಂಖ್ಯೆ 37,878ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
