ಬೆಂಗಳೂರು:ದಿನವೂ ರಸ್ತೆಯಲ್ಲಿ ನಿಂತು ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರಿಗೂ ಕರೊನಾ ಭೀತಿ ಕಾಡುತ್ತಿದೆ.
ಚೆಕ್​ಪೋಸ್ಟ್ ನಿರ್ವಿುಸಿರುವ ಕಡೆಗಳಲ್ಲಿ ಪೊಲೀಸರು ತಪಾಸಣೆ ಮಾಡುತ್ತಾರೆ. ಬಹಳಷ್ಟು ಚಾಲಕರು ಪೊಲೀಸರ ಹತ್ತಿರವೇ ವಾಹನ ನಿಲ್ಲಿಸಿ ಐಡಿ ಕಾರ್ಡ್ ತೋರಿಸುವ ಕೆಲಸ ಮಾಡುತ್ತಾರೆ. ಬೈಕ್ ಸವಾರರಂತೂ ಅವರ ಬಳಿಯೇ ವಾಹನ ನಿಲ್ಲಿಸಿ ದಾಖಲೆ ತೋರಿಸುತ್ತಿರುವ ಕಾರಣ ಕರೊನಾ ಭೀತಿ ಹೆಚ್ಚಿದೆ. ವಾಹನಗಳನ್ನು ನಿಲ್ಲಿಸಿ ಪಾಸ್ ತಪಾಸಣೆ ಮಾಡಲೇಬೇಕು ಎಂದು ಮೇಲಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿರುವುದರಿಂದ ನಿರ್ಲಕ್ಷಿಸುವಂತಿಲ್ಲ ಎನ್ನುವುದು ಪೊಲೀಸರ ಅಳಲು. ನೈರ್ಮಲ್ಯಕ, ಮಾಸ್ಕ್ ನೀಡಲಾಗಿದೆ. ಆದರೆ, ದೂರದಲ್ಲಿಯೇ ನಿಂತು ವಾಹನ ಪರಿಶೀಲಿಸುವ ವ್ಯವಸ್ಥೆ ಆಗಿಲ್ಲ. ನಿರ್ದಿಷ್ಟ ಸ್ಥಳದಲ್ಲಿ ಟೋಲ್​ಗೇಟ್ ರೀತಿ ತಾತ್ಕಾಲಿಕ ಗ್ಲಾಸ್ ರೂಂ ನಿರ್ವಿುಸಿಕೊಟ್ಟರೆ ಭಯ ವಿಲ್ಲದೆ ತಪಾಸಣೆ ಮಾಡಬಹುದೆಂಬುದು ಅಧಿಕಾರಿಗಳ ಸಲಹೆಯಾಗಿದೆ.
ಕೆಲವೆಡೆ ವಾಹನ ದಟ್ಟಣೆ:ನಗರದಲ್ಲಿ ಬಹುಪಾಲು ರಸ್ತೆಗಳು ಬಂದ್ ಆಗಿವೆ, ಇಲ್ಲವೇ ಒನ್ ವೇ ಆಗಿ ಪರಿವರ್ತನೆ ಮಾಡಲಾಗಿದೆ.
ಲಾಕ್​ಡೌನ್​ನಿಂದ ಕೆಲವು ವಿನಾಯಿತಿ ಘೋಷಣೆ ಮಾಡಿರುವ ಕಾರಣ ರಸ್ತೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ನೌಕರರು ಶೇ.50 ಮತ್ತು ಐಟಿ-ಬಿಟಿ ಕಂಪನಿಗಳ ಶೇ.33 ಮಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿರುವ ಕಾರಣ ವಾಹನಗಳ ಓಡಾಟ ನಿರ್ಬಂಧ ಮಾಡುವುದು ಕಷ್ಟದ ಕೆಲಸ. ಅಗತ್ಯ ಇರುವ ಕಡೆಯಲ್ಲಿ ಒನ್ ವೇ ತೆಗೆದು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಸೂಕ್ತ. ಅಲ್ಲದೆ, ಇಕ್ಕಟ್ಟಾದ ರಸ್ತೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಿ ಎನ್ನುವ ಒತ್ತಾಯಗಳು ಸಾರ್ವಜನಿಕರಿಂದ ಕೇಳಿಬಂದಿವೆ.
ಪಾಸ್ ದುರ್ಬಳಕೆ ಸಹಿಸುವುದಿಲ್ಲ
ಬೆಂಗಳೂರು: ಆಂಬುಲೆನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅದೇರೀತಿ, ಕೂಲಿಕಾರ್ವಿುಕರ ಹೆಸರಿನಲ್ಲಿ ದುರುಪಯೋಗ ಆದರೆ ಸಹಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ. ಬಡ ಜನರಿಗೆ ಊಟ ವಿತರಿಸುವ ನೆಪದಲ್ಲಿ ಎಲ್ಲೆಲ್ಲಿಗೋ ಅಡ್ಡಾಡುತ್ತಿದ್ದಾರೆ. ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕೆಎಸ್​ಪಿ ಕ್ಲಿಯರ್ ಪಾಸ್ ಇಲ್ಲದೆ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ತಪಾಸಣೆ ವೇಳೆ ಪಾಸ್ ಇಲ್ಲದಿರುವುದು ಗೊತ್ತಾದರೆ, ವಾಹನ ಜಪ್ತಿ ಮಾಡುವುದಲ್ಲದೆ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರ ಕುರಿತು ಕಿರುಚಿತ್ರ:ಲಾಕ್​ಡೌನ್ ಬಂದೋಬಸ್ತ್ ಡ್ಯೂಟಿ ಮಾಡುತ್ತಿರುವ ಪೊಲೀಸರ ಕುರಿತು ಕಿರುಚಿತ್ರ ನಿರ್ವಿುಸಲು ನಿರ್ಧರಿಸಲಾಗಿದೆ. ಕರೋನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿಯೂ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಜನರಿಗೆ ತೋರಿಸುವುದು ಉದ್ದೇಶವಾಗಿದೆ. ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಜತೆ ರ್ಚಚಿಸಲಾಗಿದೆ. ಅವರ ನಿರ್ದೇಶನದಲ್ಲಿ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸಂಕಷ್ಟದಲ್ಲೂ ಗೋಲ್ಮಾಲ್: ಕಳಪೆ ಪಿಪಿಇ ಕಿಟ್ ಖರೀದಿಸಿದ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
