ಬೆಂಗಳೂರು:ಸಾವು ಒಂದೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ. ಹಾಗೆಯೇ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಫಲಿತಾಂಶ ಒಂದೇ ಅಂತಿಮವೂ ಅಲ್ಲ. ಜೀವನ ದೊಡ್ಡದು. ಸಾಧನೆಗೆ ಬಹಳಷ್ಟು ಅವಕಾಶಗಳು ಇವೆ. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕೇ ಹೊರತು ಸಾವಿನ ಬಾಗಿಲಾಗಿ ಅಲ್ಲ.’ ಈ ನಿಟ್ಟಿನಲ್ಲಿ ಮನೋವೈದ್ಯರ ನೀಡಿರುವ ಸಲಹೆಗಳು ಇಲ್ಲಿವೆ. ಕಲಿಕೆಗೆ ಒತ್ತಡ, ಇತರೆ ಪ್ರತಿಭಾವಂತ ಮಕ್ಕಳಿಗೆ ಹೋಲಿಸಿ ಹೀಯಾಳಿಸುವುದರಿಂದ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಆಗಾಗ್ಗೆ ಮರುಕಳಿಸುತ್ತಲೇ ಇವೆ. ಅದರಲ್ಲೂ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಅನುತ್ತೀರ್ಣರಾದರೆ ಜೀವನವೇ ಮುಗಿಯಿತು ಎಂಬಂತೆ ಬಿಂಬಿಸುವುದರಿಂದ ಇತ್ತೀಚೆಗೆ ಸಾವಿಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಪಾಲಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು.
ಪರೀಕ್ಷೆಯಲ್ಲಿ ಎಷ್ಟೇ ಅಂಕ ಗಳಿಸಿದರೂ ಅವರನ್ನು ಬೈಯ್ಯುವ, ಹೀಯಾಳಿಸುವ, ಹೊಡೆಯುವ ಬದಲು, ಅವರಿಗೆ ಇರುವ ಇತರೆ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನೋವೈದ್ಯರು ಹೇಳಿದ್ದಾರೆ. ಈ ವಿಚಾರದಲ್ಲಿ ಶಿಕ್ಷಕರ ಪಾತ್ರವೂ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಯ ಬುದ್ಧಿಮತ್ತೆ ಅರಿತಿರುವ ಶಿಕ್ಷಕರು ಪರೀಕ್ಷೆ ಸಂದರ್ಭದಲ್ಲಿ ಮಕ್ಕಳನ್ನು ಓದಲು ಉತ್ತೇಜಿಸಬೇಕು. ಪರೀಕ್ಷೆ ನಂತರ ಅವರು ಹೇಗೆ ಪರೀಕ್ಷೆ ಬರೆದಿದ್ದಾರೆ ಎಂಬುದನ್ನು ತಿಳಿದುಕೊಂಡು ಸರಿಯಾಗಿ ಬರೆದಿಲ್ಲ ಎಂಬುದು ಖಾತ್ರಿಯಾದರೆ. ಫಲಿತಾಂಶದ ಬಗ್ಗೆ ಅವರಲ್ಲಿ ಆತಂಕ ಮೂಡಿಸದೆ ಮರು ಪರೀಕ್ಷೆಗೆ ಸಜ್ಜುಗೊಳಿಸುವ ಪ್ರಯತ್ನ ಮಾಡಬೇಕು. ಮಾತ್ರವಲ್ಲ ಫಲಿತಾಂಶ ಬಂದ ನಂತರ ಪಾಲಕರು ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬ ಬಗ್ಗೆ ಶಿಕ್ಷಕರು ತಿಳಿಹೇಳಬೇಕು.
ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆ ಅದನ್ನು ಪಾಲಕರು ಅವಮಾನ ಎಂದು ಭಾವಿಸಬೇಡಿ. ಬದಲಿಗೆ ಮತ್ತೊಂದು ಪ್ರಯತ್ನ ಮಾಡಲು ಅವರನ್ನು ಉತ್ತೇಜಿಸಿ. ಬಿಸಿನೆಸ್​ನಲ್ಲಿ ಅಭಿವೃದ್ಧಿ ಆಗಲಿಲ್ಲ, ಕೆಲಸದಲ್ಲಿ ಬಡ್ತಿ ಸಿಗಲಿಲ್ಲ ಎಂದು ಯಾರೂ ಸಾಯುವುದಿಲ್ಲ. ಹಾಗಾಗಿ ಪರೀಕ್ಷೆ ಫಲಿತಾಂಶ ಒಂದರಿಂದಲೇ ಮಕ್ಕಳ ಬುದ್ಧಿ ಸಾಮರ್ಥ್ಯವನ್ನು ಅಳೆಯಬೇಡಿ.’
|ಡಾ. ಉಮಾ ಹಿರಿಸಾವೆಸೀನಿಯರ್ ಫ್ರೊಫೆಸರ್, ಕ್ಲಿನಿಕ್ ಸೈಕಾಲಜಿ ವಿಭಾಗ, ನಿಮ್ಹಾನ್ಸ್
ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುವ ಮಾನಸಿಕತೆ ಹೊಂದಬೇಕು.
|ಬಿ.ಸಿ.ನಾಗೇಶ್ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ ಕಾರಣಕ್ಕೆ ಮನನೊಂದು ಆರು ವಿದ್ಯಾರ್ಥಿಗಳು ಹಾಗೂ ಕಡಿಮೆ ಅಂಕ ಬಂದಿವೆ ಎಂದು ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಯಡಹಳ್ಳಿ ಗ್ರಾಮದ ಪೂಜಾ ಚಳಗೇರಿ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರದ ಎಂ.ಜೆ.ಸ್ಪಂದನಾ, ಗದಗ ಜಿಲ್ಲೆ ಹರ್ತಿ ಗ್ರಾಮದ ಪವಿತ್ರಾ ಲಿಂಗದಾಳ, ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ಕಡ್ಲೆ ಗ್ರಾಮದ ಪ್ರಣಮ ಈಶ್ವರ ನಾಯ್ಕ, ಬೀದರ್ ಜಿಲ್ಲೆ ಮದರಗಿ ಗ್ರಾಮದ ಸುಹಾಸಿನಿ ದಿಲೀಪ ಮಳಚಾಪುರ, ಬಳ್ಳಾರಿ ನಗರದ ಕಂಟೋನ್ಮೆಂಟ್ ನಿವಾಸಿ ಪವನ ಸಾಯಿ, ವಿಜಯನಗರ ಜಿಲ್ಲೆ ಹೊಸಕೋಟೆ ತಾಲೂಕು ಗರಗ ಗ್ರಾಮದ ಶ್ಯಾಮರಾಜ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಜಿಲ್ಲೆ ಬಸವನಹಳ್ಳಿಯ ಸಂಧ್ಯಾ ಶೇ.77 ಅಂಕ ಬಂದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
