ಬೀದರ್:ಗಡಿ ಜಿಲ್ಲೆಯಲ್ಲಿ ಕರೊನಾ ರಣಕೇಕೆ ಮುಂದುವರಿದಿದೆ. ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎರಡು ದಿನದ ಹಿಂದೆ ಮೃತಪಟ್ಟಿದ್ದ 26 ವರ್ಷದ ಯುವಕನಿಗೂ ಕರೊನಾ ಸೋಂಕು ಇದ್ದದ್ದು ಇಂದು(ಬುಧವಾರ) ದೃಢಪಟ್ಟಿದೆ.
ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಜೂ.15ರಂದು ಮಲ್ಕಾಪುರ ಗ್ರಾಮದ ಯುವಕ ಮೃತಪಟ್ಟಿದ್ದ. ಈತನ ವರದಿಯಲ್ಲಿ ಈಗ ಕರೊನಾ ಸೋಂಕು ಪಾಸಿಟಿವ್​ ಬಂದಿದ್ದು, ಸಂಜೆಯ ಹೆಲ್ತ್​ ಬುಲೆಟಿನ್​ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಬರಲಿದೆ. ಯುವಕ ಸಾವಿನೊಂದಿಗೆ ಜಿಲ್ಲೆಯಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ. ಯುವಕನ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.ಇದನ್ನೂ ಓದಿರಿಸ್ನಾನ ಮಾಡಲು ಹೋದ ಪತ್ನಿ ಜತೆಯಲ್ಲೇ ಪತಿ ಸಾವು!
ಲಾಕ್​ಡೌನ್ ಸಡಿಲಿಕೆಯಾಗಿ ಜನಜೀವನ ಸಹಜತೆಯತ್ತ ಸಾಗಿದಂತೆ ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ತನ್ನ ಕದಂಬಬಾಹು ಚಾಚುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 381ಕ್ಕೇರಿದ್ದು, ಇಂದು 15ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆಗಳಿವೆ.
ಹೊಸದಾಗಿ ಬರುತ್ತಿರುವ ಬಹುತೇಕ ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರ ಲಿಂಕ್ ಇದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿಗೆ ಮಹಾ ಕಂಟಕ ಎದುರಾಗಿದೆ. ಮೂರು ವಾರಗಳಲ್ಲೇ ಈ ತಾಲೂಕಿನ 170 ಮಂದಿಗೆ ಸೋಂಕು ಅಂಟಿದೆ.
ಇದನ್ನೂ ಓದಿರಿಚೀನಾ ಕಂಪನಿಗಳನ್ನು ನಿಷೇಧಿಸಲು ಆರ್​ಎಸ್​ಎಸ್​ನ ಸ್ವದೇಶಿ ಜಾಗರಣ ಮಂಚ್ ಆಗ್ರಹ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − seven =
Remember me
