ಬೆಂಗಳೂರು:ಹಣ ಕಳಿಸದಿದ್ದರೆ ರಾಜ್ಯ ಹೈಕೋರ್ಟ್​ನ ನ್ಯಾಯಮೂರ್ತಿಗಳ ಕೊಲೆ ಮಾಡುವುದಾಗಿ ವಾಟ್ಸ್​​​ಆ್ಯಪ್​ ಸಂದೇಶದ ಮೂಲಕ‌ ಅಪರಿಚಿತರು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ:ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ: ಪ್ರಾಣ ಉಳಿಸಿಕೊಳ್ಳಲು ಸೇತುವೆಯಿಂದ ನದಿಗೆ ಜಿಗಿದ ಜನ
ಈ ಕುರಿತಾಗಿ ಹೈಕೋರ್ಟ್​ನ ಸಾರ್ವಜನಿಕ ಸಂಪರ್ಕಾಧಿಕಾರಿ(P.R.O) ಮುರಳಿಧರ್​​ ಎಂಬುವರ ಮೊಬೈಲ್​​​ಗೆ​​ ಅಪರಿಚಿತ ನಂಬರ್​ನಿಂದ ಬೆದರಿಕೆ ಸಂದೇಶ ಬಂದಿದ್ದು, ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಎಚ್​​​.ಟಿ.‌ನರೇಂದ್ರ ಪ್ರಸಾದ್, ಅಶೋಕ್​​​.ಜಿ. ನಿಜಗಣ್ಣನವರ್, ಎಚ್​​.ಪಿ. ಸಂದೇಶ್, ಕೆ ನಟರಾಜನ್ ಹಾಗೂ ವೀರಪ್ಪನವರ ಕೊಲೆ ಮಾಡುವುದಾಗಿ ತಿಳಿಸಲಾಗಿದೆ.
ಹಿಂದಿ, ಉರ್ದು ಮತ್ತು ಇಂಗ್ಲಿಷ್​​ ಭಾಷೆಯಲ್ಲಿ ಸಂದೇಶ ಕಳುಹಿಸಿರುವ ಅಪರಿಚಿತರು, ಪಾಕಿಸ್ತಾನದ ಮೂಲದ ಅಕೌಂಟ್ ನಂಬರ್ ನೀಡಿ 50 ಲಕ್ಷ ಹಣ ನೀಡಬೇಕು ಇಲ್ಲವಾದರೆ ದುಬೈ ಗ್ಯಾಂಗ್​​​ನಿಂದ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಈ ಹಿನ್ನೆಲೆ ಮುರಳಿಧರ್​​ ಸೆಂಟ್ರಲ್​​ಸೆನ್​​ ಪೊಲೀಸ್​​​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಗಳು, ತನಿಖೆಯನ್ನು ಮುಂದುವರೆಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − three =
Remember me
