ಬೆಂಗಳೂರು:ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ (426 ಮಂದಿ) ಕೋವಿಡ್ ಸೋಂಕಿತರ ಸಾವು ಹೆಚ್ಚಾಗುತ್ತಿದ್ದು, ಇದರೊಂದಿಗೆ 18 ಜಿಲ್ಲೆಗಳಲ್ಲಿ ಸಾವಿನ ದೃಢ ಪ್ರಮಾಣ ದರ ರಾಜ್ಯದ ಸರಾಸರಿಗಿಂತ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸೋಂಕಿನ ಬಗ್ಗೆ ನಿರ್ಲಕ್ಷ್ಯತೆ ವಹಿಸದೆ ಇನ್ನೂ ಕೆಲ ಸಮಯ ಸ್ವಯಂ ಪ್ರೇರಿತರಾಗಿ ನಿಯಮಾವಳಿ ಪಾಲಿಸುವುದು ಸೂಕ್ತ ಎಂದು ತಜ್ಞರು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ವರದಿಯಾದ 7 ದಿನಗಳ ಪ್ರಕರಣಗಳನ್ನು ಆಧರಿಸಿ ಕೋವಿಡ್ ವಾರ್ ರೂಮ್ ವಿಶ್ಲೇಷಣೆ ಮಾಡಿದೆ. ಈ ಅವಧಿಯಲ್ಲಿ ರಾಜ್ಯದ ದೈನಂದಿನ ಸಾವಿನ ಪ್ರಮಾಣ ಸರಾಸರಿ ಶೇ 0.41 ಇದೆ. ಮೈಸೂರಿನಲ್ಲಿ ಗರಿಷ್ಠ (ಶೇ. 1.81) ಪ್ರಮಾಣದಲ್ಲಿ ಸಾವು ಸಂಭವಿಸಿದ್ದರೆ, ಕೊಡಗು ಜಿಲ್ಲೆಯಲ್ಲಿ (ಶೇ. 0.04) ಕನಿಷ್ಠ ಪ್ರಮಾಣದಲ್ಲಿ ಸಾವಿನ ಪ್ರಮಾಣ ಖಚಿತಪಟ್ಟಿದೆ. ತೀವ್ರ ಆತಂಕ ಸೃಷ್ಟಿಸಿದ್ದ ಕೋವಿಡ್ ಮೂರನೇ ಅಲೆ ಎಷ್ಟು ವೇಗವಾಗಿ ಹರಡಿತೋ ಅಷ್ಟೇ ಬೇಗ ಸೋಂಕು ಪ್ರಮಾಣ ತಗ್ಗಿದೆ. ಆದರೆ, ಸೋಂಕಿತರಲ್ಲಿ ಸಾವಿಗೀಡಾವವರ ಸಂಖ್ಯೆ ಏರಿಕೆಯಾಗುತ್ತಿದೆ. 13 ಜಿಲ್ಲೆಗಳಲ್ಲಿ ಮರಣ ದೃಢ ಪ್ರಮಾಣ ಶೇ. 0.50ಗಿಂತ ಅಧಿಕವಿದೆ.
ಜಿಲ್ಲಾವಾರು ಸಾವಿನ ಪ್ರಮಾಣ ದರ:ರಾಮನಗರ (ಶೇ. 1.01), ರಾಯಚೂರು (ಶೇ. 0.81), ಗದಗ ಮತ್ತು ಕಲಬುರಗಿ (ಶೇ. 0.73), ಬೀದರ್ (ಶೇ.0.69), ಚಿಕ್ಕಬಳ್ಳಾಪುರ (ಶೇ.0.66), ಉಡುಪಿ (ಶೇ. 0.63), ಮಂಡ್ಯ ಮತ್ತು ಬಳ್ಳಾರಿ (ಶೇ. 0.62), ಮೈಸೂರು (ಶೇ.0.55), ವಿಜಯಪುರ (ಶೇ. 0.52), ದಾವಣಗೆರೆ (ಶೇ. 0.51) ಹೆಚ್ಚಿನ ಪ್ರಮಾಣದಲ್ಲಿ ಸಾವಿನ ಸಂಖ್ಯೆ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ (ಶೇ. 0.06), ಧಾರವಾಡ (ಶೇ. 0.13) ಹಾಗೂ ಬೆಂಗಳೂರು ನಗರ (ಶೇ. 0.15) ಜಿಲ್ಲೆಯಲ್ಲಿ ದೃಢ ಪ್ರಮಾಣ ಕಡಿಮೆಯಿದೆ. ರಾಜ್ಯದಲ್ಲಿ ಕಳೆದ ತಿಂಗಳ ಮೊದಲ ವಾರ ನಿತ್ಯದ ಸಾವಿನ ಸಂಖ್ಯೆ 4-5 ಆಸುಪಾಸಿನಲ್ಲಿತ್ತು. ಸೋಂಕು ದೃಢ ಪ್ರಮಾಣ ಶೇ.0.01ಕ್ಕೆ ಇಳಿಕೆಯಾಗಿತ್ತು. ಈಗ ದಿನವೊಂದಕ್ಕೆ ಸಾವಿನ ಸಂಖ್ಯೆ 50 ಮೀರಿದ್ದು, ಮರಣ ದೃಢ ಪ್ರಮಾಣವೂ ಶೇ. 0.32ಕ್ಕೆ ಏರಿಕೆಯಾಗಿದೆ.
90-99 ವಯಸ್ಸಿನವರ ಸಾವು ಹೆಚ್ಚು:ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಈವರೆಗೂ ಮೃತಪಟ್ಟವರ ಸಂಖ್ಯೆ 39,250ಕ್ಕೆ ಏರಿಕೆಯಾಗಿದೆ. ಈ ಪೈಕಿ 90-99 ವರ್ಷ ವಯೋಮಾನದವರು ಅತೀ ಹೆಚ್ಚು (ಶೇ. 9.9) ಸಂಖ್ಯೆಯಲ್ಲಿ ಮೃತರಾಗಿದ್ದು, 80-89 ವಯೋಮಾನದ ಶೇ. 6.4, 70-79 ವರ್ಷದವರಲ್ಲಿ ಶೇ. 5.0, 60-69 ವರ್ಷದವರಲ್ಲಿ ಶೇ. 3.4, 50-50 ವರ್ಷದವರಲ್ಲಿ ಶೇ. 1.8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 100 ವರ್ಷ ಮೇಲ್ಪಟ್ಟವರಲ್ಲಿ ಶೇ. 4.5 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯ ಕಾಂಗ್ರೆಸ್​ನಲ್ಲಿ ಶುರುವಾಗಿದೆ ಪಾದಯಾತ್ರೆ ಮೇನಿಯಾ: ಮತ್ತೆ ಹಲವು ಕಡೆಯಿಂದ ಯಾತ್ರೆಗೆ ಬೇಡಿಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 9 =
Remember me
