ತುಮಕೂರು:ಪಾವಗಡದಲ್ಲಿ ಇಂದು ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಬೆಳಗ್ಗೆ ಸಾವಿಗೀಡಾಗಿದ್ದ ಯುವತಿಯ ತಂಗಿ ರಾತ್ರಿ ಮೃತಪಟ್ಟಿದ್ದು, ಕುಟುಂಬವೊಂದಕ್ಕೆ ಒಂದೇ ದಿನದಲ್ಲಿ ಎರಡು ಸಾವಿನ ಆಘಾತಕಾರಿ ಸುದ್ದಿ ತಟ್ಟಿದೆ. ಈ ಸಾವಿನೊಂದಿಗೆ ಈ ಅಪಘಾತದಲ್ಲಿ ಸತ್ತವರ ಸಂಖ್ಯೆ ಆರಕ್ಕೆ ಏರಿದೆ.
ತುಮಕೂರು ಜಿಲ್ಲೆಯ ಪಾವಗಡದ ಪಳವಳ್ಳಿ ಬಳಿ ಓವರ್​ ಲೋಡ್ ಹಾಗೂ ಅತಿವೇಗದ ಚಾಲನೆಯಿಂದಾಗಿ ಬಸ್ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೊದಲು ನಾಲ್ವರು ಸಾವಿಗೀಡಾಗಿ, ಬಳಿಕ ಇನ್ನೊಬ್ಬರು ಮೃತಪಟ್ಟಿದ್ದರು. ಮಾತ್ರವಲ್ಲ, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಐವರು ಮೃತಪಟ್ಟಿದ್ದರು. ಕಾಲೇಜು ವಿದ್ಯಾರ್ಥಿಗಳಾದ ಪೋತಗಾನಹಳ್ಳಿ ಅಮೂಲ್ಯ (20), ದಾದಾವಲಿ (20) ಹಾಗೂ ಸೂಲನಾಯಕನಹಳ್ಳಿಯ ಅಜಿತ್ ಕುಮಾರ್ (22), ಬೆಸ್ತರಹಳ್ಳಿಯ ಮೆಕಾನಿಕ್ ಶಾನವಾಜ್ (18) ಹಾಗೂ ವೈ.ಎನ್.ಹೊಸಕೋಟೆಯ ಕಲ್ಯಾಣ್ ಕುಮಾರ್(22) ಮೃತಪಟ್ಟಿದ್ದರು‌.
ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ದಾದಾವಲಿ ಬೆಂಗಳೂರಿನ ನಿಮ್ಹಾನ್ಸ್​​ನಲ್ಲಿ ಸಾವಿಗೀಡಾದರೆ ಉಳಿದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ ಅಮೂಲ್ಯ ತಂಗಿ ಹರ್ಷಿತಾ ಕೂಡ ಸಾವಿಗೀಡಾಗಿದ್ದಾರೆ. ಗಾಯಗೊಂಡಿದ್ದ ಈಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಸ್ ಅಪಘಾತ, ಸತ್ತವರು ಐವರು; ಒಂದಿಡೀ ಬಸ್​ ಜನರು ಗಾಯಾಳುಗಳು!?
ಅಮ್ಮನೆದುರೇ ಮಗಳ ಕುತ್ತಿಗೆ ಮೇಲೆ ಸಾಗಿದ ಆಟೋ; ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + three =
Remember me
