ಆನೇಕಲ್:ತಿರುಪತಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು ಶವವಾಗಿ. ಅದರಲ್ಲೂ ನಾಲ್ಕು ದಿನಗಳ ಹಿಂದೆ ಪಾರ್ಕ್ ಮಾಡಲಾಗಿದ್ದ ಕಾರಲ್ಲಿ ಈತನ ಶವ ಕಂಡುಬಂದಿದ್ದು, ವಾಸನೆ ಬರಲಾರಂಭಿಸಿದ ಬಳಿಕವಷ್ಟೇ ವಿಷಯ ಗೊತ್ತಾಗಿದೆ.
ಬೆಂಗಳೂರಿನ ಆನೇಕಲ್​ನ ಹೆನ್ನಾಗರ ಗೇಟ್ ಬಳಿ ಈ ಪ್ರಕರಣ ನಡೆದಿದೆ. ಚೇತನ್ ಕುಮಾರ್ (35) ಎಂಬಾತ ಸಾವಿಗೀಡಾದ ವ್ಯಕ್ತಿ. ಈತ ಬೆಂಗಳೂರಿನ ವೀರಭದ್ರನಗರ ನಿವಾಸಿಯಾಗಿದ್ದು, ಹೆನ್ನಾಗರ ಗೇಟ್ ಬಳಿ ಕಾರು (ಕೆಎ 51, ಎಂಎಂ 9885) ನಿಲ್ಲಿಸಲಾಗಿತ್ತು. ನಾಲ್ಕು ದಿನಗಳಿಂದ ಅಲ್ಲೇ ನಿಂತಿದ್ದ ಕಾರಿನಿಂದ ವಾಸನೆ ಬರಲಾರಂಭಿಸಿದ ಮೇಲೆ ಸಾವಿಗೀಡಾದ ಪ್ರಕರಣ ಬೆಳಕಿಗೆ ಬಂದಿತ್ತು. ಈತ ತಿರುಪತಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿಹೋಗಿದ್ದರಿಂದ, ತಿರುಪತಿಯಲ್ಲಿರಬೇಕು ಎಂದು ಭಾವಿಸಿ ಮನೆಯವರು ಸುಮ್ಮನಿದ್ದರು ಎನ್ನಲಾಗಿದೆ.
ಆರಂಭದಲ್ಲಿ ಈ ವ್ಯಕ್ತಿ ಮಲಗಿರಬಹುದೆಂದು ಸ್ಥಳೀಯರು ಭಾವಿಸಿದ್ದರು. ಆದರೆ ಅನುಮಾನ ಬಂದು ಪರಿಶೀಲಿಸಿದಾಗ ಸತ್ತುಹೋಗಿರುವುದು ತಿಳಿದುಬಂದಿತ್ತು. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದು ಡೋರ್ ತೆಗೆಸಿದಾಗ ಶವ ಕೊಳೆಯಲಾರಂಭಿಸಿದ್ದು ಖಚಿತವಾಗಿತ್ತು. ಶವ ಹೊರತೆಗೆಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
