ಬೆಂಗಳೂರು:ಕಟ್ಟಡದ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು 19 ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಜಿಆರ್ ಟೆಕ್ ಪಾರ್ಕ್ ಎಂಬ ಬೃಹತ್ ಐಟಿ ಕಂಪನಿಯಿಂದ ಈ ಕೃತ್ಯ ನಡೆದಿದೆ.
ವೈಟ್ ಫೀಲ್ಡ್ ನಲ್ಲಿರುವ ಜಿಆರ್ ಟೆಕ್ ಪಾರ್ಕ್ ಮುಂಭಾಗದಲ್ಲಿ ಬಿಬಿಎಂಪಿ ರಸ್ತೆಯ ಪಕ್ಕದಲ್ಲಿದ್ದ 19 ಮರಗಳನ್ನು ಕಡಿಯಲಾಗಿದೆ. ರಾತ್ರೋ ರಾತ್ರಿ 19 ಅಶೋಕ ಮರಗಳನ್ನ ಕಂಪನಿ ಕಟ್ ಮಾಡಿದೆ.
ಯಾವುದೇ ಅನುಮತಿ ಇಲ್ಲದೆ ಬಿಬಿಎಂಪಿಗೆ ಸೇರಿದ ಮರಗಳನ್ನು ಕಟ್ ಮಾಡಲಾಗಿದೆ. ಈಗ ಕಂಪನಿಯ ವಿರುದ್ಧ ಅರಣ್ಯ ಇಲಾಖೆಯಲ್ಲಿ ಕೇಸ್ ದಾಖಲಾಗಿದೆ. ಇಂತಹ ಘಟನೆಗಳು ಮಹಾನಗರಿಯಲ್ಲಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಕೃತ್ಯಗಳು ಬೆಳಕಿಗೆ ಬಂದಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿರುವ 800 ವರ್ಷ ಹಳೆಯ ಚೋಳರ ಕಾಲದ ಲಕ್ಷ್ಮಿಕಾಂತ ದೇಗುಲದ ಆವರಣದಲ್ಲಿರುವ ಮರಗಳನ್ನು ಕಡಿಯಲಾಗಿತ್ತು. ಪಾರಂಪರಿಕ ದೇಗುಲದ ಆವರಣದಲ್ಲಿದ್ದ ಮರಗಳ ಮಾರಣ ಹೋಮ ನಡೆದಿತ್ತು. ಕಾಮಗಾರಿಯ ನೆಪವೊಡ್ಡಿ 7-8 ಮರಗಳಿಗೆ ಕೊಡಲಿ ಪೆಟ್ಟು ಕೊಡಲಾಗಿತ್ತು. ಭಾರತೀಯ ಸರ್ವೇಕ್ಷಣಾ ಇಲಾಖೆ ಅಧೀನದ ದೇಗುಲದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಈ ಮರಗಳನ್ನು ಕಡಿಯಲಾಗಿತ್ತು ಎನ್ನಲಾಗಿದೆ.
ಚೆಸ್ ಆಟಗಾರ್ತಿ ತಾನಿಯಾ ಸಚ್‌ದೇವ್ ಫೋಟೋ ಎಡಿಟ್ ಮಾಡಲು ಹೇಳಿದರೆ ಹೀಗಾ ಮಾಡೋದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + twelve =
Remember me
