ಬೆಂಗಳೂರು:ಹೊಸ ಕರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಮಾತ್ರವಲ್ಲದೇ, ಸೋಂಕಿಗೆ ಒಳಗಾದವರಿಗಿಂತ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆಯೇ ಹೆಚ್ಚಾಗಿದೆ.
ನಿನ್ನೆ 5,985 ಜನರು ಸೋಂಕಿಗೆ ಒಳಗಾಗಿದ್ದರೆ, ಇಂದು ಈ ಸಂಖ್ಯೆ 4,267ಕ್ಕೆ ಇಳಿದಿದೆ. ಜತೆಗೆ, ಕೋವಿಡ್​ನಿಂದ ಗುಣವಾದವರ ಸಂಖ್ಯೆ ಬರೋಬ್ಬರಿ 5,218ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,354ಕ್ಕೆ ತಲುಪಿದ್ದರೆ, ಚೇತರಿಕೆ ಕಂಡವರು 99,126 ಆಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 79,908 ಆಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ, ಖರೀದಿ, ವಿತರಣೆ ನಿರ್ಧರಿಸಲಿದೆ ಈ ಸಮಿತಿ; ಕೇಂದ್ರೀಯ ಟಾಸ್ಕ್​ಪೋರ್ಸ್​ ರಚನೆ
ನಿನ್ನೆಗೆ ಹೋಲಿಸಿದಲ್ಲಿ ಸಾವಿನ ಸಂಖ್ಯೆ ಇಂದು ಹೆಚ್ಚಾಗಿದೆ. ನಿನ್ನೆ 107 ಜನರು ಮೃತಪಟ್ಟಿದ್ದರೆ, ಇಂದಿನ ಸಾವಿನ ಸಂಖ್ಯೆ 114 ಆಗಿದೆ. ಜತೆಗೆ ಕೋವಿಡ್​ನಿಂದ ಮೃತಪಟ್ಟವರ ಪ್ರಮಾಣ 3,312ಕ್ಕೆ ಹೆಚ್ಚಳವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 681.
ರಾಜಧಾನಿಯಲ್ಲಿ ಕೋವಿಡ್​ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 1,948 ಮಂದಿ ಸೋಂಕಿತರಾಗಿದ್ದರೆ, 1,243ಕ್ಕೆ ಇಳಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 75,428 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇಂದು 2037 ಜನರು ಡಿಸ್ಚಾರ್ಜ್​ ಆಗಿದ್ದಾರೆ. ನಿನ್ನೆ ಈ ಸಂಖ್ಯೆ 1,837 ಆಗಿತ್ತು. ಒಟ್ಟಾರೆ ಗುಣವಾದವರ ಸಂಖ್ಯೆ 41,166. ಸಾವಿನ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದ್ದು, 36 ಜನರು ಮೃತಪಟ್ಟಿದ್ದು ಒಟ್ಟು ಸಂಖ್ಯೆ 1,276ಕ್ಕೆ ಏರಿದೆ.
ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ ಇಲ್ಲಿದೆ

ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
