ಬೆಂಗಳೂರು:ಶಕ್ತಿ ಯೋಜನೆ ಮೂಲಕ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಶಕ್ತಿ ನೀಡುತ್ತಿರುವ ಸರ್ಕಾರ, ಶಾಲಾ ಮಕ್ಕಳನ್ನು ನಿಶ್ಶಕ್ತಿಗೊಳಿಸುವಂಥ ಕೆಲಸಕ್ಕೆ ಮುಂದಾಗಿದೆ. ಶಕ್ತಿ ಯೋಜನೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಮತ್ತೊಂದೆಡೆ ಮಕ್ಕಳ ಬಿಸಿಯೂಟದ ವಿಚಾರವಾಗಿ ಅನುದಾನ ಕೊರತೆ ಕಾಡಲಾರಂಭಿಸಿದೆ.
ರಾಜ್ಯದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಅಡಿ ವಾರದಲ್ಲಿ 2 ದಿನ ನೀಡುತ್ತಿದ್ದ ಮೊಟ್ಟೆ/ಬಾಳೆಹಣ್ಣನ್ನು ಸದ್ಯ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಈ ಕುರಿತು ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’; ಪುರುಷರಿಗೆ ಪರದಾಟ!
ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು/ಶೇಂಗಾ ಚಿಕ್ಕಿ ವಿತರಿಸುವಂತೆ ಸರ್ಕಾರ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ:‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟ
ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆಯಂತೆ ಮೊದಲ ಹಂತದಲ್ಲಿ ಜೂ.20ರಿಂದ ಜು.15ರ ವರೆಗೆ ಅಥವಾ ಸರ್ಕಾರದ ಮುಂದಿನ ಆದೇಶ ಬರುವ ತನಕ ಫಲಾನುಭವಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಯೋಜನೆಯನ್ನು ಮುಂದುವರಿಸುವಂತೆ ತಿಳಿಸಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿಯೂ ಸಾವಿನಿಂದ ಪಾರಾದ ಮಹಿಳೆ!
ಇಲಾಖೆಯಲ್ಲಿರುವ ಅನುದಾನದ ಆಧಾರದಲ್ಲಿ ಸದ್ಯದ ಮಟ್ಟಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಹೊಸ ಸರ್ಕಾರವು ಜು.7ರಂದು ಬಜೆಟ್ ಮಂಡಿಸಲಿದೆ. ಅದಾದ ನಂತರ ಬಜೆಟ್‌ನಲ್ಲಿ ಕೈಗೊಳ್ಳುವ ನಿರ್ಧಾರದಂತೆ ಇಲಾಖೆ ಮೊಟ್ಟೆ ವಿತರಣೆ ಮಾಡಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + three =
Remember me
